ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಟ್ಟಡ ಕಾರ್ಮಿಕರಿಗೆ ಸದಸ್ಯತ್ವ ನೋಂದಣಿ

Rashmi Kasaragodu
Updated On : 11 Jun 2014, 2:04 am

ಚನ್ನರಾಯಪಟ್ಟಣ: ಪಟ್ಟಣದ ಹೊಸ ಬಸ್ಸು ನಿಲ್ದಾಣದ ಬಳಿ ಸುಮಾರು 20 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಕಾರ್ಮಿಕ ಅಧಿಕಾರಿ ಪ್ರಭಾಕರ್ ಹಾಗೂ ಛಲವಾಧಿ ಮಹಾ ಸಭಾ ಕಾರ್ಯಕರ್ತರು ಭೇಟಿ ನೀಡಿ ಕಟ್ಟಡ ಕಾರ್ಮಿಕರಿಗೆ ಸ್ಥಳದಲ್ಲೇ ಸದಸ್ಯತ್ವ ನೋಂದಣಿಯನ್ನು ಮಾಡಲಾಯಿತು. ನಂತರ ಕಾರ್ಮಿಕ ಅಧಿಕಾರಿ ಪ್ರಭಾಕರ್ ಮಾತನಾಡಿ ಅನಿರೀಕ್ಷಿತ ಸಾವು, ಅಪಘಾತಕ್ಕೆ ಪರಿಹಾರ, ಅಂತ್ಯ ಸಂಸ್ಕಾರ ನಿಧಿ, ಕಲ್ಯಾಣ, ಶಿಕ್ಷಣ, ನಿವೃತ್ತಿ ವೇತನ ಇತ್ಯಾಧಿ ಸೌಲಭ್ಯಗಳು ಕಾರ್ಮಿಕರು ಪಡೆದುಕೊಳ್ಳಿ, ಸರ್ಕಾರದ ಈ ಎಲ್ಲಾ ಸೌಲಭ್ಯಗಳು ಜೀವನಕ್ಕೆ ಉಪಯುಕ್ತವಾದುದ್ದು ಎಂದರು. ಆರ್. ಮಂಜುನಾಥ್, ಕೆ. ಆರ್. ವೆಂಕಟೇಶ್, ನುಗ್ಗೇಹಳ್ಳಿವೆಂಕಟೇಶ್, ಹಿರೀಸಾವೆ ದಶರತ್, ರವಿಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement