ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಾದಚಾರಿಗೆ ಗಾಯ

Rashmi Kasaragodu
Updated On : 11 Jun 2014, 2:04 am

ಸಕಲೇಶಪುರ: ಪುರಸಭೆಗೆ ಸೇರಿರುವ ಹೇಮಾವತಿ ವಾಣಿಜ್ಯ ಸಂಕೀರ್ಣದ ಸಜ್ಜೆ  ಕುಸಿದು ವ್ಯಕ್ತಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಸುಮಾರು 25 ವರ್ಷಗಳ ಹಳೆಯ ಕಟ್ಟಡದ ಮಧ್ಯ ಭಾಗದಲ್ಲಿದ್ದ ಸಜ್ಜೆ ಕೆಲಭಾಗ ಕುಸಿದು ಬಿದ್ದಿತು. ಇದರಿಂದ ಕಟ್ಟಡದ ತಳಭಾಗದಲ್ಲಿದ್ದ ಪಾದಚಾರಿ ವ್ಯಕ್ತಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ಅದೃಷ್ಟವಶಾತ್ ಹೆಚ್ಚು ಜನ ಸಂಚಾರವಿರುವ ಈ ಸ್ಥಳದಲ್ಲಿ ಜನರಿಲ್ಲದೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.



ಅವಧಿ ವಿಸ್ತರಣೆ
ಹಾಸನ: ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ತಾಲೂಕಿನ  ಮೊಸಳೆ ಹೊಸಹಳ್ಳಿಯಲ್ಲಿ 2014 ನೇ ಸಾಲಿನ  ಐಟಿಐ ಪ್ರವೇಶಕ್ಕೆ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ. 14 ಕ್ಕೆ ವಿಸ್ತರಿಸಲಾಗಿದೆ. ಆದ್ದರಿಂದ ಅಸಕ್ತ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಮೊಸಳೆಹೊಸಳ್ಳಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರನ್ನು  ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement