ಪ್ರೊ.ಕಲ್ಬುರ್ಗಿ,ಮೂರ್ತಿ ಗಡಿಪಾರಿಗೆ ಬಿಜೆಪಿ ಆಗ್ರಹ
ಹಾಸನ: ದೇವರ ನಂಬಿಕೆ ಅವಹೇಳನಕಾರಿ ಆಗಿ ಮಾತನಾಡಿ ಜನರ ಧಾರ್ಮಿಕಹಕ್ಕಿಗೆ ಧಕ್ಕೆ ತಂದಿರುವ ಪ್ರೊ. ಕಲ್ಬುರ್ಗಿ ಮತ್ತು ಯು.ಆರ್. ಅನಂತಮೂರ್ತಿ ಅವರನ್ನು ಗಡಿಪಾರು ಮಾಡಬೇಕು ಎಂದು ಹಾಸನ ಜಿಲ್ಲಾ ಬಿಜೆ ಪಿ. ವಕ್ತಾರ ಎನ್.ಡಿ. ಪ್ರಸಾದ್ ಆಗ್ರಹಿಸಿದ್ದಾರೆ.
ವಿಕೃತ ಹೇಳಿಕೆ: ದೇವತೆಗಳೆಂದರೆ ಕಲ್ಲಿನ ವಿಗ್ರಹಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ತಪ್ಪಲ್ಲ ಎಂಬ ವಿಕೃತ ಹೇಳಿಕೆಯನ್ನು ಕೊಟ್ಟಿರುವ ಪ್ರೊ. ಕಲ್ಬುರ್ಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಬ್ಬ ಮಹಾನ್ ಅವಿವೇಕಿ ಯು.ಆರ್. ಅನಂತಮೂರ್ತಿ ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುಷ್ಟಾಂತವನ್ನು ಉದಾಹರಿಸಿ ಶಾಂತ ಸರೋವರದಲ್ಲಿ ಕಲ್ಲೆಸೆಯುವ ಹೀನ ಕೃತ್ಯಕ್ಕೆ ಮುಂದಾಗಿದ್ದಾರೆಂದು ಅವರು ಹೇಳಿದ್ದಾರೆ. ಕಲ್ಲು ವಿಗ್ರಹ ನಿರ್ಜೀವ ವಸ್ತು. ಅವರ ಮೇಲೆ ಮೂತ್ರ ಮಾಡಿದರೆ ಅದರಿಂದ ಯಾವ ಪ್ರತಿಕ್ರಿಯೆಯೂ ಬರದೆಂಬ ಬಾಲಿಶ ಹೇಳಿಕೆಯೊಂದಿಗೆ ಸುಮ್ಮನಿರುವ ಸ್ವಭಾವದವರಿಗೆ ಏನು ಮಾಡಿದರೂ ತೊಂದರೆಯಿಲ್ಲ ಎಂಬ ಕೆಟ್ಟ ಸಂದೇಶವನ್ನು ಹರಿಯಬಿಟ್ಟಿರುವ ಈ ಬುದ್ಧಿ ಜೀವಿಗಳು ತಮ್ಮ ತಾತ ಮುತ್ತಾತಂದಿರ ಪೋಟೋಗಳ ಮೇಲೂ ಮೂತ್ರ ವಿಸರ್ಜನೆ ಮಾಡಿ ಬೆನ್ನನ್ನು ತಾವೇ ತಟ್ಟಿಕೊಳ್ಳಬಹುದೆಂದು ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಪ್ರಶಸ್ತಿ ವಾಪಸ್ ಪಡೆಯಲಿ: ಅರ್ಹರಿಗೆ ಸಿಗಬೇಕಾಗಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಆಳುವ ಸರ್ಕಾರದ ರಾಜಕಾರಿಣಿಗಳ ಮುಂದೆ ಲಾಬಿಮಾಡಿ ವಾಮ ಮಾರ್ಗದಲ್ಲಿ ಪ್ರಶಸ್ತಿಯನ್ನು ಧಕ್ಕಿಸಿಕೊಂಡ ಅನಂತಮೂರ್ತಿಯಿಂದ ಇನ್ನೇನುತಾನೆ ನಿರೀಕ್ಷಿಸಲು ಸಾಧ್ಯ. ಸರ್ಕಾರ ಅನಂತಮೂರ್ತಿಗೆ ಕೊಟ್ಟಿರುವ ಜ್ಞಾನಪೀಠ ಪ್ರಸ್ತಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಪ್ರಸಾದ್ ಅಗ್ರಹಿಸಿದರು