ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶುಶ್ರೂಷಕಿಯರಿಗೆ ತಾಳ್ಮೆ ಅಗತ್ಯ'

Rashmi Kasaragodu
Updated On : 11 Jun 2014, 2:03 am

ಚನ್ನರಾಯಪಟ್ಟಣ: ವೈದ್ಯೋ ಹರಿ ನಾರಾಯಣ  ಎಂಬಂತೆ ವೈದ್ಯರಿಗೆ ಪ್ರಾಮುಖ್ಯತೆ  ನೀಡುವಂತೆ ಶುಶ್ರೂಷಕಿಯರಿಗೂ ಅಷ್ಟೇ ಪ್ರಾಮುಖ್ಯತೆ ನೀಡ ಬೇಕು, ಖಾಸಗಿ ಆಸ್ಪತ್ರೆ ಮತ್ತು  ಸರ್ಕಾರಿ ಆಸ್ಪತ್ರೆಗೆ ಕೆಲಸ ಮಾಡಲು ತೆರಳಿದಾಗ ಅಲ್ಲಿಗೆ ಬರುವಂತಹ ರೋಗಿಗಳನ್ನು ಸೇವಾ ಮನೋಭಾವದಿಂದ ನೋಡಿ ಅವರೊಂದಿಗೆ ತಾಳ್ಮೆಯಿಂದ ವರ್ತಿಸುವಂತೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಸಲಹೆ ನೀಡಿದರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಹೊರ ರಾಜ್ಯಗಳಾದ 80 ರಿಂದ 90 ರಷ್ಟು  ವಿದ್ಯಾರ್ಥಿಗಳು ನರ್ಸಿಂಗ್ ತರಬೇತಿಗೆ ಬರುತ್ತಿದ್ದರು. ನರ್ಸಿಂಗ್ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ವಿದೇಶಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಗ್ರಾಮೀಣರು ಹಿಂದೆ: ಆದರೆ ನರ್ಸಿಂಗ್ ತರಬೇತಿ ಪಡೆಯುವಲ್ಲಿ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಹಿಂದೆ ಬೀಳುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಿ.ಎಲ್. ಅರುಣ್ ಕುಮಾರ್ ಸ್ವಾಗತಿಸಿದರು, ಚೇತನ್ ವಂದಿಸಿದರು. ಮಧುಶ್ರೀ  ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಪ್ರತಿಜ್ಞಾ ವಿಧಿ ಸ್ವೀಕಾರವನ್ನು ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ  ಕೆ.ಜಿ.ವಿಜಯ್ ಕುಮಾರ್ ನಡೆಸಿಕೊಟ್ಟರು. ಮೈಸೂರಿನ ವೈದ್ಯ ವಿಕಾಸ್ ಕಾಲೇಜಿನ ಪ್ರಾಂಶುಪಾಲ ಬಿ. ಅಮ್ಮಯ್ಯ, ಗ್ರೇಡ್ 2 ತಹಸೀಲ್ದಾರ್ ಸೊಮಶೇಖರ್, ಪ್ರಾಂಶುಪಾಲ ಬಿ.ಎಲ್. ಅರುಣ್ ಕುಮಾರ್ ಬೋಧಕ  ರಾದ ದಾನನಗೌಡ, ಎಸ್. ಎಸ್. ಅರುಣ್ ಕುಮಾರ್, ಭೀಮನ್ ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement