ಅಂಗವಿಕಲರು ಕೀಳರಿಮೆ ಬಿಟ್ಟು ಸಾಧನೆಗೆ ಮುಂದಾಗಲಿ
ಅರಕಲಗೂಡು: ಅಂಗವಿಕಲರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸಾಮಾನ್ಯರಂತೆ ಬದುಕು ಸಾಗಿಸಲು ಪ್ರಯತ್ನಿಸಿದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಂಗವಿಕಲರಿಗೆ 2012-13 ಮತ್ತು 2013-14 ನೇ ಎಸ್ಎಫ್ಸಿ ಶೇ.3 ರ ಅನುದಾನದಲ್ಲಿ ತ್ರಿ ಚಕ್ರ ವಾಹನ ವಿರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೆರವು: ಅಂಗವಿಕಲರು ಮಾನಸಿಕ ಕೀಳರಿಮೆಗೆ ಒಳಗಾಗದೆ ಸಾಮಾನ್ಯರಲ್ಲಿ ನಾವು ಒಬ್ಬರು ಎಂಬ ಮನೋಭಾವ ಬೆಳಸಿಕೊಳ್ಳಬೇಕು. ಅಂಗವೈಕಲ್ಯತೆ ಮರೆತು ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಿ ನಿಮ್ಮ ನೆರವಿಗೆ ಸರ್ಕಾರ ಇರುತ್ತದೆ ಎಂದರು. ಶಾಸಕರ ನಿಧಿಯಿಂದಲೂ ವಿಧಾನಸಭಾ ಕ್ಷೇತ್ರದಲ್ಲಿ 10 ಅಂಗವಿಕಲರಿಗೆ 3 ಚಕ್ರಗಳ ವಾಹನ ನೀಡಲಾಗಿದೆ. ಎಂದರು. ಪ.ಪಂ. ಅಧ್ಯಕ್ಷೆ ಮಂಜುಳ ಯೋಗೇಶ್, ಉಪಾಧ್ಯಕ್ಷ ಸಲೀಂ ಪಾಷಾ, ಸದಸ್ಯರಾದ ನಂದಕುಮಾರ್, ಮಂಜುನಾಥ, ನಿರಂಜನ, ಬೀರಪ್ಪ ಹಾಗೂ ಮುಖ್ಯಾಧಿಕಾರಿ ಸುರೇಶ್ ಬಾಬು, ಎಂಜಿನಿಯರ್ ಕವಿತಾ ಮುಂತಾದವರು ಉಪಸ್ಥಿತರಿದ್ದರು.