ದೇಶದಲ್ಲಿ ಶೇ.10ರಷ್ಟು ಮಕ್ಕಳು ಬಾಲ ಕಾರ್ಮಿಕರು
ಹೊಳೆನರಸೀಪುರ: ದೇಶದಲ್ಲಿ ಶೇ.10ರಷ್ಟು ಮಕ್ಕಳು ಬಾಲ ಕಾರ್ಮಿಕರಾಗಿದ್ದು, ಅವರ ಭವಿಷ್ಯ ನಾಶವಾಗುತ್ತಿದೆ ಎಂದು ಹಿರಿಯ ನ್ಯಾಯಾಧೀಶ ಜಿ.ಎಂ. ಶೀನಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗು ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಿಶ್ವ ಬಾಲ ಕಾರ್ಮಿಕ ನಿರ್ಮೂಲನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಯೊಂದು ಹಕ್ಕನ್ನು ಪಡೆಯಲು ಹೋರಾಟದ ಮೂಲಕ ಪಡೆಯಲಾಗುತ್ತಿದೆ. ಆದ್ದರಿಂದ ಇಂದು ನಾವು ಬಾಲ ಕಾರ್ಮಿಕರನ್ನು ನಾನಾ ರಂಗಗಳಲ್ಲಿ ತೊಡಗಿಸಿರುವುದರಿಂದ ಅವರಲ್ಲಿರುವ ಭವಿಷ್ಯ ಶಕ್ತಿ ಹರಣವಾಗುತ್ತಿದೆ. ಆದ್ದರಿಂದ ಸಮಾಜದಲ್ಲಿ ಮಕ್ಕಳನ್ನು ಬಾಲ ಕಾರ್ಮಿಕರಾಗಿ ದುಡಿಯಲು ಬಿಡುವುದನ್ನು ಕೈಬಿಟ್ಟು ಅವರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುವುದರಿಂದ ದೇಶದ ಭವಿಷ್ಯದ ಉತ್ತಮ ಪ್ರಜೆಯಾಗಿ ದೇಶಕ್ಕೆ ತನ್ನ ಅದ ಶಕ್ತಿಯನ್ನು ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ನಿರ್ಮೂಲನೆ ಬಗ್ಗೆ ವಕೀಲ ಶ್ರೀನಿವಾಸ್ ವಿಶೇಷ ಉಪನ್ಯಾಸ ನೀಡಿದರು. ಸಭೆಯನ್ನು ಉದ್ದೇಶಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಆರ್. ಮುಕುಂದೇಗೌಡ, ಕಾರ್ಮಿಕ ನಿರೀಕ್ಷಕಿ ಮಂಗಳಗೌರಿ ಮಾತನಾಡಿದರು.
ಕಿರಿಯ ನ್ಯಾಯಾಧೀಶ ಚಂದ್ರಶೇಖರ ಪ್ರಭಪ್ಪ ದಿಡ್ಡಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿ.ಮಾದೇಶ್, ಸಹಾಯಕ ಅಬಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ್, ಬಿ.ಇ. ಯೋಗೇಶ್ವರ್, ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ರವೀಶ್ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳು ಹಾಗು ನ್ಯಾಯಾಧೀಶರು ಹಾಗೂ ಮುಖ್ಯ ಅಥಿತಿಗಳು ನ್ಯಾಯಾಲಯದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಮೆರವಣಿಗೆಯಲ್ಲಿ ತೆರಳಿದರು. ಮೆರವಣಿಗೆಯಲ್ಲಿ ಬಾಲಕಾರ್ಮಿಕ ನಿರ್ಮೂಲನೆಗೆ ಅವಶ್ಯವಾದ ಬರಹಗಳಲ್ಲಿ ನಾಮಫಲಕಗಳನ್ನು ಹಿಡಿದು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೊದಲಿಗೆ ಶಿಕ್ಷಕಿರು ಪ್ರಾರ್ಥಿಸಿ ವಕೀಲ ರಾಮಪ್ರಸನ್ನ ಸ್ವಾಗತಿಸಿ ಎಸ್.ಎನ್.ನಾಗರಾಜು ನಿರೂಪಿಸಿದರು.