ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರುದ್ರಭೂಮಿಗೆ ಶಿಲಾನ್ಯಾಸ

Rashmi Kasaragodu
Updated On : 13 Jun 2014, 1:48 am

ಹಾಸನ: ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ರುದ್ರಭೂಮಿ ಅಭಿವೃದ್ಧಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು  ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರು ಗುರುವಾರ ನೆರವೇರಿಸಿದರು.  ನಂತರ ಮಾತನಾಡಿದ ಅವರು, ರುದ್ರಭೂಮಿ ಅಭಿವೃದ್ಧಿಗಾಗಿ ನಗರಸಭೆ ಮುಂದಿನ ಬಜೆಟ್‌ನಲ್ಲಿ ರು. 50 ಲಕ್ಷ ಮೀಸಲಿಡಲಾಗುವುದು ಎಂದರು.  ರುದ್ರಭೂಮಿ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಂಜುನಾಥ ಮೂರ್ತಿ ಮಾತನಾಡಿ, ಲಯನ್ಸ್ ಸೇವಾ ಸಂಸ್ಥೆ ಮತ್ತು ಟೆರ್ರಿ ಸಂಸ್ಥೆಯೊಂದಿಗೆ ಈ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ ಎಂದರು.
ಕೆ.ಸಿ.ಪ್ರಭು, ಹರ್ಷವರ್ಧನ್, ಪ್ರಸನ್ನ ಕೃಷ್ಣಮೂರ್ತಿ, ಕಸ್ತೂರಿ ಅಯ್ಯಂಗಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement