ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸ್ಟೆಲ್‌ಗೆ ಅರ್ಜಿ ಆಹ್ವಾನ

Rashmi Kasaragodu
Updated On : 13 Jun 2014, 1:49 am

ಹಾಸನ: ಸಕಲೇಶಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಕಲೇಶಪುರ ಟೌನ್‌ನಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು  ಸಕಲೇಶಪುರ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಪ.ಜಾತಿ ವರ್ಗದ ವಿದ್ಯಾರ್ಥಿವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.    ಅರ್ಜಿಗಳನ್ನು ಆಯಾ ವಿದ್ಯಾರ್ಥಿ ನಿಲಯಗಳಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಹಿಂದಿನ ತರಗತಿಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ನಕಲು ಪ್ರತಿ ಹಾಗೂ 2 ಪಾಸ್‌ಪೋರ್ಟ್ ಫೋಟೋಗಳನ್ನು ಲಗತ್ತಿಸಿ ಜೂ.15ರಂದು ಸಂಜೆ 5-30 ಗಂಟೆಯೊಳಗಾಗಿ ಆಯಾ ವಿದ್ಯಾರ್ಥಿನಿಲಯದ ವಾರ್ಡನ್ ಅವರಿಗೆ ಸಲ್ಲಿಸತಕ್ಕದ್ದು. ವಿಳಂಬವಾಗಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಕಲೇಶಪುರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ನಾಟಿ ಸೌತೆಕಾಯಿ ಬೆಳೆಗಾರರ ಸಂಘ ರಚನೆ
ಹಾಸನ: ಹಾಸನದ  ಕಂದಲಿ  ಕೃಷಿ ವಿಜ್ಞಾನ  ಕೇಂದ್ರದ ವತಿಯಿಂದ  ಹೊಳೆನರಸೀಪುರ ತಾಲೂಕಿನ  ಕೃಷ್ಣಾಪುರ ಗ್ರಾಮದಲ್ಲಿ  ಇತ್ತೀಚೆಗೆ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ನಾಟಿ ಸೌತೆ ಬೆಳೆಗಾರಣ ಸಂಘದ ರಚನೆ ಸಂಬಂಧ ಗುಂಪು ಚರ್ಚೆಯನ್ನು ಕೈಗೊಳ್ಳಲಾಗಿತ್ತು.  ಚರ್ಚೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ  ಡಾ.ಬಿ.ಎಸ್. ಬಸವರಾಜುರವರು ರೈತರ ಜೊತೆ ಚರ್ಚಿಸುತ್ತಾ ನಾಟಿ ಸೌತೆಕಾಯಿ  ಬೆಳೆಯಲು ಹೊಳೇನರಸೀಪುರ ತಾಲೂಕಿನಲ್ಲಿ ಉತ್ತಮ ವಾತಾವರಣ ವಿದೆ. ಇದಕ್ಕೆ ಉತ್ತಮ  ಬೇಡಿಕೆ ಇರುವುದರಿಂದ ಇದರ ಉಳಿಕೆಗಾಗಿ ಸಂಘಗಳ ಮುಖಾಂತರ ಶ್ರಮಿಸುವುದು ಅತಿ  ಅವಶ್ಯಕ ಎಂದು ತಿಳಿಸುತ್ತಾ ಸೌತೆಯಲ್ಲಿ ಕಾಣಿಸಿಕೊಳ್ಳುವ ರೋಗ ಮತ್ತು ಕೀಟಗಳನ್ನು  ವೈಜ್ಞಾನಿಕ ಪದ್ಧತಿ ಅಳವಡಿಕೆ ಮುಖೇನ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.  ಮಣ್ಣು ವಿಜ್ಞಾನಿ  ಡಾ.ಎಸ್. ಚನ್ನಕೇಶವ ಚರ್ಚಿಸುತ್ತಾ, ಮಣ್ಣು ಪರೀಕ್ಷೆಯನ್ನಾಧರಿಸಿ ಪೋಷಕಾಂಶಗಳ ಬಳಕೆಯನ್ನು ಮಾಡುವುದರ ಜೊತೆಗೆ ಲಘು ಪೋಷಕಾಂಶಗಳ ಬಳಕೆ ಮತ್ತು  ನಿರ್ವಹಣೆಯಿಂದ ಉತ್ತಮ ಗುಣಮಟ್ಟದ ಕಾಯಿ ಮತ್ತು ಹೆಚ್ಚಿನ ಇಳುವರಿಯನ್ನು  ಪಡೆಯಬಹುದೆಂದು ತಿಳಿಸಿದರು.  ತೋಟಗಾರಿಕೆ ವಿಜ್ಞಾನಿ ಡಾ.ಟಿ.ಎಸ್. ಮಂಜುನಾಥಸ್ವಾಮಿ ಮಾತನಾಡಿ,  ನಾಟಿ  ಸೌತೆಕಾಯಿಯು ಅಲ್ಪಾವಧಿ ಬೆಳೆಯಾಗಿದೆ. ಶೀಘ್ರ ಕಟಾವಿಗೆ ಬರು ವುದರಿಂದ ಕಡಿಮೆ  ಅವಧಿಯಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ತಿಳಿಸಿದರು.  ಕೃಷಿ ವಿಸ್ತರಣಾ ವಿಜ್ಞಾನಿಗಳಾದ ಡಾ.ಹೆಚ್.ಕೆ. ಪಂಕಜ ಅವರು, ನಾಟಿ ಸೌತೆ ಸಂಘದ ರಚನೆಯನ್ನು ಮಾಡು ವುದರಿಂದ ರೈತ ಬಾಂಧವರು ಸಂಘಟಿತ ರಾಗಿ ಸರ್ಕಾರದಿಂದ  ದೊರೆಯುವ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು ಆರ್ಥಿಕವಾಗಿ ಸದೃಢರಾಗ ಬಹುದೆಂದು ತಿಳಿಸಿದರು. ಸಭೆಯಲ್ಲಿ ಕೃಷ್ಣಾಪುರ ಗ್ರಾಮದ ಸುಮಾರು 50 ರೈತರು ಹಾಗೂ  ರೈತ ಮಹಿಳೆಯರು  ಇದ್ದರು.
ಪತಿಯಿಂದಲೇ ಪತ್ನಿ ಕೊಲೆ
ಚನ್ನರಾಯಪಟ್ಟಣ: ಪತಿಯೇ ತನ್ನ ಎರಡನೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶ್ರವಣಬೆಳಗೊಳದಲ್ಲಿ ನಡೆದಿದೆ.  ಒಂದು ವರ್ಷದ ಹಿಂದೆ ವೀಣಾ ಎಂಬುವರನ್ನು ಅಜಯ್‌ಕುಮಾರ್ ಎರಡನೆ ಮದುವೆ ಮಾಡಿಕೊಂಡಿದ್ದ. ಆದರೆ ದಾಂಪತ್ಯದಲ್ಲಿ ವಿರಸ ಉಂಟಾಗಿ ಆತ ವೀಣಾಳನ್ನು  (28)ಶ್ರವಣಬೆಳಗೊಳದ ಆಕೆಯ ತಾಯಿಯ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿಡ್ಡಾನೆ.   ಅಜಯ್‌ಕುಮಾರ್ ತನ್ನ ಮೊದಲ ಪತ್ನಿಗೆ ಗೊತ್ತಿಲ್ಲದ ರೀತಿಯಲ್ಲಿ ವೀಣಾಳನ್ನು ಕಳೆದ ವರ್ಷ ವಿವಾಹವಾಗಿದ್ದ. ತಡವಾಗಿ ಈ ಸುದ್ದಿ ತಿಳಿದ ಮೊದಲ ಪತ್ನಿ ಗಲಾಟೆ ಮಾಡಿದ್ದರಿಂದ ಆತ ಎರಡನೇ ಹೆಂಡತಿಯ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆರೋಪಿ ಅಜಯ್‌ಕುಮಾರ್ ನಾಪತ್ತೆಯಾಗಿದ್ದು, ಶ್ರವಣಬೆಳಗೊಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement