ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ವಶ
ಸಕಲೇಶಪುರ: ತಾಲೂಕಿನ ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಟ್ರಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಟ್ಟಣ ಠಾಣೆ ಪೋಲಿಸರನ್ನು ಕಂಡ ಹಾಲೇಬೇಲೂರು ಗ್ರಾಮದ ಶ್ಯಾಂ ಎಂಬ ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ. ದಾಳಿಯ ನೇತೃತ್ವವವನ್ನು ಪಟ್ಟಣ ಠಾಣೆ ಪಿಎಸ್ಐ ಜೀವನ್ ವಹಿಸಿದ್ದರು.