ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

6 ನೇ ದಿನಕ್ಕೆ ಕಾಲಿರಿಸಿದ ಧರಣಿ: ರಾಜ್ಯ ಹೆದ್ದಾರಿಯಲ್ಲಿ ಎಮ್ಮೆಕಟ್ಟಿ ಪ್ರತಿಭಟನೆ

Rashmi Kasaragodu
Updated On : 15 Jun 2014, 12:50 pm

ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೆರೆಗೆ ಯಗಚಿ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯ್ತಿ ಎದುರು ರೈತ ಸಂಘ ಹಾಗೂ ಹಾರನಹಳ್ಳಿಯ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ಅರಸೀಕೆರೆ-ಹಾಸನ ರಾಜ್ಯ ಹೆದ್ದಾರಿಗೆ ಎಮ್ಮೆ ಕಟ್ಟಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಪ್ರತಿಭಟನಾಕಾರರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಯಗಚಿ ನೀರು ಹಾರನಹಳ್ಳಿ ಕೆರೆಗೆ ಬಿಡಿ ಎಂಬ ಘೋಷಣೆಗಳೊಂದಿಗೆ ಹೆದ್ದಾರಿಗೆ ಬಂದು ಎಮ್ಮೆಗಳನ್ನು ಕಟ್ಟಿ ರಸ್ತೆತಡೆ ನಡೆಸಿದರು.
ಸೋಮವಾರ ಬಂದ್: ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಯುಗಚಿ ನದಿಯಿಂದ ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಸಿದರೆ ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ. ಯಗಚಿ ಇಲಾಖೆ ಅಭಿಯಂತರರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವ ತನಕ ನಿರಂತರ ಹೋರಾಟ ನಡೆಸುವುದಾಗಿ ಹೇಳಿದ ಅವರು ಸೋಮವಾರ ಹಾರನಹಳ್ಳಿ ಬಂದ್‌ಗೆ ಕರೆ ನೀಡಲಾಗುವುದೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹಾರನಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷರು ಹಾಲಿ ಗ್ರಾ.ಪಂ.ಸದಸ್ಯರಾದ ಹೆಚ್.ಎಸ್.ನಂದೀಶ್, ವಕೀಲ ಹಾರನಹಳ್ಳಿ ಮಧುಸೂಧನ್, ಗ್ರಾ.ಪಂ.ಅಧ್ಯಕ್ಷ  ಖರೀಮ್ ಸಾಬ್, ಗ್ರಾಪಂ ಸದಸ್ಯರಾದ ಓಂಕಾರಮೂರ್ತಿ, ತರಕಾರಿ ಮಹೇಶ್, ಆಟೋ ಶಿವಕುಮಾರ್, ಪುಟ್ಟಸ್ವಾಮಿ, ಸೋಮಣ್ಣ, ಜಾವಗಲ್ ಇಂದ್ರೇಶ್ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ರೈತರು, ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement