ಅನಾಥ ಮಗು ಪತ್ತೆ: ಪಾಲಕರ ಪತ್ತೆಗೆ ಮನವಿ
ಹಾಸನ: ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಮುಂಭಾಗದ ಚರಂಡಿಯಲ್ಲಿ ಸುಮಾರು ಒಂದೂವರೆ ವರ್ಷದ ಮಗುವು ಸಿಕ್ಕಿದ್ದು ಮಗುವಿನ ಪಾಲನೆ ಪೋಷಣೆಗಾಗಿ ಹಾಸನದ ತವರಿನ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್‌ಗೆ ಸೇರಿಸಿದೆ. 61 ಸೆಂ.ಮೀ. ತೆಳುವಾದ ಮೈಕಟ್ಟು, ಕೋಲುಮುಖ, ಎಣ್ಣೆಕೆಂಪು ಬಣ್ಣ,ಬಿಳಿ, ನೀಲಿ, ಹಳದಿ ಬಣ್ಣವಿರುವ ರೆಡಿ ಮೇಡ್ ಶರ್ಟ್, ಕಾಫಿ ಕಲರ್ ಚಡಿ, ಕುತ್ತಿಗೆಯಲ್ಲಿ ಒಂದು ತಾಯತ ಧರಿಸಿದೆ. ಈ ಬಗ್ಗೆ ವಾರಸುದಾರರು ಹಾಸನ ಬಡಾವಣೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರನ್ನು ಸಂಪರ್ಕಿಸಬೇಕೆಂದು ಕೋರಿದೆ.
ಅಪರಿಚಿತ ಮಹಿಳೆ ಶವ ಪತ್ತೆ: ಹಾಸನದ ಆಡುವಳ್ಳಿಯಲ್ಲಿ ವಾಸುದಾರರಿಲ್ಲದೆ ನರಳುತ್ತ ಬಿದ್ದಿದ್ದ 75 ವರ್ಷವಯಸ್ಸಿನ ಅಪರಿಚಿತ ಹೆಂಗಸನ್ನು ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಹೆಂಗಸು ಮೃತಪಟ್ಟಿದ್ದಾರೆ. ಕೋಲುಮುಖ, ಎಣ್ಣೆಗೆಂಪು ಬಣ್ಣ, ಕುತ್ತಿಗೆಯ ಎಡಭಾಗದಲ್ಲಿ ಒಂದು ಕಪ್ಪು ಮಚ್ಚೆ, ಬಿಳಿ ಕೂದಲು, ಮಾಸಲು ಕೆಂಪು-ಬಿಳಿ ಬಣ್ಣದ ನೈಟಿ, ಹಳದಿ ಬಣ್ಣದ ಲಂಗ ಧರಿಸಿದ್ದಾರೆ