ಆಲೂಗಡ್ಡೆ ಬೆಳೆ ಕುರಿತು ಕಾರ್ಯಾಗಾರ ನಾಳೆ
ಹಾಸನ: ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಯನ್ನು ಪ್ರಮುಖ ತರಕಾರಿ ಬೆಳೆಯಾಗಿ ಬೆಳೆಯುತ್ತಿದ್ದು ಕಳೆದ 6-7 ವರ್ಷಗಳಿಂದ ಆಲೂಗೆಡ್ಡೆ ಬೆಳೆಯು ಕೊನೆ ಅಂಗಮಾರಿ ರೋಗಕ್ಕೆ ತುತ್ತಾಗಿದ್ದು ಸದರಿ ರೋಗದ ತೀವ್ರತೆಯಿಂದ ರೈತರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.
ರೈತರು ಕೈಗೊಳ್ಳಬಹುದಾದ ಮುನೆಚ್ಚರಿಕೆ ಕ್ರಮಗಳು ಹಾಗೂ ತಾಂತ್ರಿಕ ಬೇಸಾಯ ಕ್ರಮಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಕೃಷಿ ಕಾಲೇಜು, ಕಾರೆಕೆರೆ ಹಾಗೂ ಆಲೂಗೆಡ್ಡೆ ಸಂಶೋಧನಾ ಕೇಂದ್ರ, ಸೋಮನಹಳ್ಳಿ ಕಾವಲು, ಇವರ ಸಹಯೋಗದೊಂದಿಗೆ ನುರಿತ ವಿಜ್ಞಾನಿಗಳಿಂದ ಒಂದು ದಿನದ ತರಬೇತಿ ಕಾರ್ಯಾಯಾಗಾರವನ್ನು ಜೂ. 16ರಂದು ಬೆಳಿಗ್ಗೆ 11 ಗಂಟೆಗೆ ಸಿಲ್ವರ್ ಜ್ಯುಬಿಲಿ ಪಾರ್ಕ್, ತೋಟಗಾರಿಕೆ ಇಲಾಖೆ, ಹಾಸನದಲ್ಲಿ ಏರ್ಪಡಿಸಲಾಗಿದೆ.
ಮಾಹಿತಿಗೆ ಹಿರಿಯ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತಿತಿ ಹಾಸನ ದೂರವಾಣಿ ಸಂಖ್ಯೆ 08172-262390 ಸಂಪರ್ಕಿಸಿ.