ಕಾಫಿ ಕಾಂಡ ಕೊರಕ ಹತೋಟಿಗೆ ನೂತನ ಪ್ರಯೋಗಗಳು
ಹಾಸನ: ಅರೇಬಿಕಾ ತಳಿ ಕಾಫಿಯನ್ನು ವಿಪರೀತವಾಗಿ ಕಾಡುತ್ತಿರುವ ಬಿಳಿಕಾಂಡ ಕೊರಕದ ಹತೋಟಿಗಾಗಿ ನಾನಾ ನೂತನ ಪ್ರಯೋಗಗಳನ್ನು ಇತ್ತೀಚೆಗೆ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸುಮಾರು 200 ವರ್ಷಗಳಿಂದ ಅರೇಬಿಕಾ ಕಾಫಿಯಲ್ಲಿ ಬಿಳಿ ಕಾಂಡ ಕೊರಕದ ಸಮಸ್ಯೆಯಿದ್ದು, ಇದರ ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನಗಳಾಗುತ್ತಿವೆ. ಈ ದಿಸೆಯಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಒತ್ತು ನೀಡಿ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ ಎಂದು ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ಸಹಾಯಕ ಮಂಜುನಾಥ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಇಡಿಇ ಕನ್ಸಲ್ಟಿಂಗ್ನ ಮುಖ್ಯಸ್ಥ ಬಿ. ಗಿರೀಶ್, ಮಾಸ್ ಕಾಫಿ ಉತ್ಪಾದಕರ ಕಂಪೆನಿಯ ಅಧ್ಯಕ್ಷ ಎಚ್.ಎಂ. ಲೋಕೇಶ್, ಕೃಷಿಕರಾದ ಹೆದ್ದುರ್ಗ ಮೋಹನ್, ಸಂಗಮೇಶ್, ತೇಜೇಶ್ ಮಣಸುಮಕ್ಕಿ, ಭೂಮಿ ಸಂಸ್ಥೆಯ ಪುಟ್ಟಸ್ವಾಮಿ ಭಾಗವಹಿಸಿದ್ದರು.