ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊಳೆ ಶುಂಠಿ ತಾಕಿಗೆ ತಜ್ಞರ ಭೇಟಿ, ಪರಿಶೀಲನೆ

Rashmi Kasaragodu
Updated On : 15 Jun 2014, 12:44 pm

ಹಾಸನ: ಶುಂಠಿಯಲ್ಲಿ ಕೊಳೆ ರೋಗಕ್ಕೆ ತುತ್ತಾದ ಗಿಡಗಳನ್ನು ರೈತರಿಗೆ ತೋರಿಸಿ ಅದರ  ನಿರ್ವಹಣೆಗೆ ಕಾಪರ್ ಆಕ್ಸಿಕ್ಲೋರೈಡನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ನಂತೆ ದ್ರಾವಣ ಮಾಡಿ ರೋಗ ಬಂದ ಗುಣಿ ಮತ್ತು ಅಕ್ಕ ಪಕ್ಕದ ಐದಾರು ಆರೋಗ್ಯವಂತ ಗಿಡಗಳಿಗೂ ಮಣ್ಣು ನೆನೆಯುವಂತೆ ಸುರಿಯಬೇಕು ಎಂದು ವಿಜ್ಞಾನಿಗಳಾದ ಡಾ. ಬಿ.ಎಸ್. ಬಸವರಾಜು ರೈತರಿಗೆ ಸಲಹೆ ನೀಡಿದರು.  ಇತ್ತೀಚೆಗೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು  ಶಾಂತಿಗ್ರಾಮ ಹೋಬಳಿ ಅದ್ದಿಹಳ್ಳಿ ಗ್ರಾಮದಲ್ಲಿ ವಿವಿಧ ರೈತರ ಶುಂಠಿ ಬೆಳೆ ತಾಕುಗಳಿಗೆ ಭೇಟಿ  ನೀಡಿದ ಸಂದರ್ಭದಲ್ಲಿ ಅವರು ಮಾತ ನಾಡಿದರು. ಕೆ.ವಿ.ಕೆ. ಕಂದಲಿಯ ಮಣ್ಣು ವಿಜ್ಞಾನಿ ಡಾ. ಚನ್ನಕೇಶವ ರೈತರಿಗೆ ಗೊಬ್ಬರವನ್ನು ಪ್ರತಿ ಎಕರೆಗೆ 43 ಕಿ.ಗ್ರಾಂ ಯೂರಿಯ, 120 ಕಿ.ಗ್ರಾಂ ಸೂಪರ್ ಫಾಸ್ಪೇಟ್  ಮತ್ತು 32 ಕಿ.ಗ್ರಾಂ ಪೋಟ್ಯಾಷ್  ಹಾಕಬೇಕೆಂದು ತಿಳಿಸಿದರು.


ಹೆಣ್ಣು ಮಕ್ಕಳಿಗೆ ನೋಟ್‌ಬುಕ್, ಬಟ್ಟೆ ಉಚಿತ ವಿತರಣೆ


ಬೇಲೂರು: ಶಿಲ್ಪಕಲಾ ಮಹಿಳಾ ಒಕ್ಕೂಟ ಮತ್ತು ಧರಣಿ ಯುವತಿ ಮಂಡಳಿ ಇವರ ವತಿಯಿಂದ ಆಯ್ದ ಸರ್ಕಾರಿ ಶಾಲಾ ಹೆಣ್ಣುಮಕ್ಕಳಿಗೆ ಬಟ್ಟೆ, ನೋಟ್ ಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಸರ್ವ ಶಿಕ್ಷಣಾ ಅಭಿಯಾನ ಕಚೇರಿಯಲ್ಲಿ ನಡೆಯಿತು.  ಭಾರತೀಗೌಡ ಮಾತನಾಡಿ, ಈ ಕಾರ್ಯಕ್ರಮಕ್ಕೆ ದಾನಿಗಳು ನೆರವು ನೀಡಿದರೆ ನಾವು ಇನ್ನೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸಹಾಯ ಮಾಡಬಹುದಾಗಿದೆ ಎಂದು ಹೇಳಿದರು. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಸಂಪನ್ಮೂಲ ಅಧಿಕಾರಿ -ನಾರಾಯಣ್ ಮಾತನಾಡಿದರು. ಮನು ಮತ್ತು-ನಾಗಮ್ಮ ಪ್ರಾರ್ಥಿಸಿದರು.  ಶಿಲ್ಪಕಲಾ ಒಕ್ಕೂಟದ ಅಧ್ಯಕ್ಷೆ ತೀರ್ಥಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ನಾರಾಯಣಮ್ಮ ಪುಸ್ತಕ ವಿತರಿಸದರು. ನಾಗಮ್ಮ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement