ಚಿಕ್ಕಬೆಟ್ಟ ಚಂದ್ರಗಿರಿ ಉತ್ಸವ ಇಂದು
ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳದ ಎಸ್‌ಡಿಜೆಎಂಐ ಹಾಗೂ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ 12 ವರ್ಷಕ್ಕೊಮ್ಮೆ ಆಚರಿಸುತ್ತಿರುವ ಚಿಕ್ಕಬೆಟ್ಟ ಚಂದ್ರಗಿರಿ ಉತ್ಸವ ಜೂ.15ರಂದು ನಡೆಯಲಿದೆ. ಚಿಕ್ಕಬೆಟ್ಟ ಚಂದ್ರಗಿರಿ ಉತ್ಸವದ ಅಂಗವಾಗಿ ಚಂದ್ರಗಿರಿಯಲ್ಲಿನ ಎಲ್ಲಾ ಬಸದಿಗಳಲ್ಲಿ ಮುಂಜಾನೆ ಕವಕಲಾಷಾಭಿಷೇಕ ಪೂಜೆ ಹಾಗೂ ಪಂಚಾಮೃತಾಭಿಷೇಕ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಚಿಕ್ಕಬೆಟ್ಟದಲ್ಲಿ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆ: ಶ್ರೀ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅಖಿಲ ಭಾರತ ದಿಗಂಬರ ಜೈನ ತೀರ್ಥಕ್ಷೇತ್ರದ ಅಧ್ಯಕ್ಷರಾದ ಸುಧೀರ್ ಜೈನ್ ಉಧ್ಘಾಟಿಸಲಿದ್ದು, ಭಾರತೀಯ ಪುರಾತತ್ವ ಇಲಾಖೆ ಬೆಂಗಳೂರಿನ ಟಿ.ಎಂ ಕೇಶವ, ಕರ್ನಾಟಕ ರಾಜ್ಯ ದಿಗಂಬರ ಜೈನ ತೀರ್ಥಕ್ಷೇತ್ರದ ಸಮಿತಿ ಅಧ್ಯಕ್ಷ ಡಿ.ಆರ್. ಶಾ, ಕಾರ್ಯದರ್ಶಿ ವಿನೋದ್‌ಕುಮಾರ್ ಬಕ್ಲೀವಾಲ್, ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರಕುಮಾರ್, ಕಾರ್ಯದರ್ಶಿ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡೇಗೌಡ, ತಾಲೂಕು ಪಂಚಾಯಿತಿ ಸದಸ್ಯ ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಚಾರ್ಯ 108 ಸಚ್ಚಿದಾನಂದಿ ಮಹಾರಾಜರು, 108 ಶೃತನಂದಿ ಮಹಾರಾಜರು,ಆರ್ಯಿಕಾಶ್ರೀ 105 ಶಿವಮತಿ ಮಾತಾಜಿ,ಆರ್ಯಿಕಾಶ್ರೀ 105 ಋದ್ಧಿಶ್ರೀ ಮಾತಾಜಿ, ಕ್ಷುಲ್ಲಕಾಶ್ರೀ 105 ಸಿದ್ದಿಶ್ರೀ ಮಾತಾಜಿ , ಕ್ಷುಲ್ಲಕಾಶ್ರೀ 105ಸರ್ವಜ್ಞಮತಿ ಮಾತಜಿ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿಲಿದ್ದಾರೆ. ಶಾಸಕ ಸಿ.ಎನ್. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.