ದೂರವಾಣಿ ಅದಾಲತ್ 21ಕ್ಕೆ
ಹಾಸನ: ಬಿಎಸ್ಎನ್ಎಲ್ ಮಹಾ ಪ್ರಬಂಧಕರು ದೂರ ಸಂಪರ್ಕ ಸೇವೆಗೆ ಸಂಬಂಧಪಟ್ಟಂತೆ ಕಳೆದ 6 ತಿಂಗಳಿಂದ ಇತ್ಯರ್ಥವಾಗದೆ ಉಳಿದಿರುವ ದೂರವಾಣಿ ದೂರುಗಳ ಪರಿಹಾರಕ್ಕಾಗಿ ದೂರವಾಣಿ ಅದಾಲತ್ ಅನ್ನು ಜೂ. 21ರಂದು ಬೆಳಗ್ಗೆ 11 ಕ್ಕೆ ನಗರದ ಬಿಎಸ್ಎನ್ಎಲ್ ಭವನದ 2ನೇ ಮಹಡಿಯ ಕಾನ್ಫರೆನ್ಸ್ ಹಾಲ್ನಲ್ಲ್ಲಿ ತಪ್ಪದೇ ಹಾಜರಾಗುವುದು. ಈ ಅದಾಲತ್ ಎಸ್ಟಿಡಿ ಐಎಸ್ಡಿ ಲೋಕಲ್ ಪಿಸಿಒ ದೂರವಾಣಿ ಗ್ರಾಹಕರಿಗೆ ಅನ್ವಯಿಸುವುದಿಲ್ಲ ಎಂದು ಸಹಾಯಕ ಮಹಾ ಪ್ರಬಂಧಕರು,(ವಾಣಿಜ್ಯ) ಬಿಎಸ್ಎನ್ಎಲ್ ಭವನ ಹಾಸನ ಅವರು ತಿಳಿಸಿದ್ದಾರೆ.
ಕೆಡಿಪಿ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಡಿ.ಜಿ. ಅಂಬಿಕಾ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಜೂ. 18ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಸುಸಜ್ಜಿತ ಲಾನ್ ಟೆನ್ನಿಸ್ ಅಂಕಣ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ಲಾನ್ ಟೆನ್ನಿಸ್ ಅಂಕಣ ಹೊಸದಾಗಿ ನಿರ್ಮಿಸಲಾಗಿದ್ದು, ಸದ್ಯದಲ್ಲೇ ಉದ್ಘಾಟಿಸಲಾಗುವುದು. ಆದ್ದರಿಂದ ಜಿಲ್ಲೆಯ ಟೆನ್ನಿಸ್ ಕ್ರೀಡಾಸಕ್ತರು ಸದಸ್ಯರಾಗಲು ಬಯಸುವವರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಹಾಸನ ಇಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ (ದೂರವಾಣಿ 246056) ಜಿಲ್ಲಾ ಕ್ರೀಡಾಂಗಣ ಹಾಸನ ಇಲ್ಲಿ ಸಂಪರ್ಕಿಸಿ.