ಪಡಿತರ ಚೀಟಿಗಾಗಿ ಎಸ್ಎಂಎಸ್: ಟೀಕೆ
ಅರಸೀಕೆರೆ: ಸರ್ಕಾರ ದಿನಕ್ಕೊಂದು ತಿಂಗಳಿಗೊಂದು ಕಾನೂನು ಕಟ್ಟಳೆ ತಂದರೆ ಮುಗ್ಧ ರೈತರಿಗೆ ಹಾಗೂ ಬಡಜನರಿಗೆ ಹೇಗೆ ಅರಿವಾಗಬೇಕು ಎಂದು ತಾಲೂಕು ಬಿಜೆಪಿ ವಕ್ತಾರ ವೈ.ಕೆ. ದೇವರಾಜ್ ಪ್ರಶ್ನಿಸಿದ್ದಾರೆ.
ಇತ್ತೀಚಿನ ನ್ಯಾಯಬೆಲೆ ಅಂಗಡಿಯಲ್ಲಿ ಮತದಾರನ ಗುರುತಿನ ಚೀಟಿಯ ಸಂಖ್ಯೆಯನ್ನು ಆಹಾರ ನಿಗಮದ ಪಡಿತರ ಚೀಟಿಗೆ ಲಗತ್ತಿಸಬೇಕೆಂದು ಇ-ಮೇಲ್ ಮಾಡಲು ಸೂಚಿಸಲಾಗಿದೆ. ಆದರೆ ಯಾವ ಬಡ ರೈತನ ಮನೆಯಲ್ಲಿ ಮೊಬೈಲ್ ಇವೆ ಎಂದು ಅವರು ಹೇಳಿದರು.
ಮೊದಲು ನೀವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವರನ್ನು ಜೈಲಿಗೆ ಕಳುಹಿಸಿ. ಗ್ರಾಮದ ವ್ಯಕ್ತಿಗಳ ಬಗ್ಗೆ ಆಯಾ ಊರಿನ ಗ್ರಾಮ ಸಹಾಯಕರಿಗೆ ಗೊತ್ತಿಲ್ಲವೇ. ಸರ್ಕಾರಿ ಯೋಜನೆಗಳು ಪ್ರಾರಂಭಿಸುವ ಮೊದಲು ಪೂರ್ವ ಯೋಜಿತ ಸಾಧಕ ಬಾಧಕಗಳ ಬಗ್ಗೆ ಚಿಂತನೆ ಇರಬೇಕೆಂದು ಒತ್ತಾಯಿಸಿದ್ದಾರೆ.