ಪ್ರತಿಭಟನಾ ಸಮಾವೇಶ 17ಕ್ಕೆ
ನಾಗಮಂಗಲ: ಅವೈಜ್ಞಾನಿಕ ಕಾನೂನು ಜಾರಿ ಮಾಡಿ ಪಡಿತರ ಚೀಟಿದಾರರ ನೆಮ್ಮದಿ ಹಾಳು ಮಾಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಜೂ. 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಾರ್ಡ್ದಾರರಿಗೆ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಆಹಾರ ಇಲಾಖೆಯ ಏಕ ಪಕ್ಷೀಯ ಧೋರಣೆಯಿಂದ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನತೆ ಆತಂಕಕ್ಕೀಡಾಗಿದ್ದಾರೆ. ನ್ಯಾಯಬೆಲೆ ಅಂಗಡಿಗೆ ಬಯೋವುಟ್ರಿಕ್ ಅಳವಡಿಸಿ, ಸಗಟು ಮಳಿಗೆಗಳಿಗೆ ಈವರೆಗೂ ಅಳವಡಿಸಿಲ್ಲ. ಇದು ಅನುಮಾನಗಳನ್ನು ಮೂಡಿಸುತ್ತದೆ. ಜೊತೆಗೆ ಪಡಿತರ ವಿತರಕರ ಕೆಲಸದ ಅವಧಿಯನ್ನು ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ತಿಳಿಸಿದರು.