ಮಾಲೇಕಲ್ ತಿರುಪತಿಯಲ್ಲಿ ಗರುಡಗಂಬ ಪ್ರತಿಷ್ಠಾಪನೆ
ಅರಸೀಕೆರೆ: ಏಪ್ರಿಲ್ 27 ರಂದು ಬಿರುಗಾಳಿ ಮಳೆಗೆ ಧರೆಗುರುಳಿದ್ದ ಅರಸೀಕೆರೆ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಗರುಡಗಂಬವನ್ನು, ಇದೀಗ ನೂತನವಾಗಿ ನಿರ್ಮಿಸಲಾಗಿದೆ.
ಗರುಡಗಂಬ ಪ್ರತಿಷ್ಠಾಪನಾ ಮಹೋತ್ಸವವು ಜೂ. 24 ಮತ್ತು 25 ರಂದು ನಡೆಯಲಿದೆ ಎಂದು ದೇವಸ್ಥಾನದ ಆಗಮಿಕ ರಾಮಪ್ರಸಾದ್ ತಿಳಿಸಿದ್ದಾರೆ. ಜೂ.24 ರಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಶುದ್ಧಿಪುಣ್ಯಾಹ, ಮೃತಿಕಾ ಸಂಗ್ರಹಣ, ಅಂಕುರಾರ್ಪಣೆ, ತ್ರಯಾಗ್ನಿಪ್ರತಿಷ್ಠೆ, ವಾಸ್ತುಕಲಶ ಸ್ಥಾಪನೆ, ವಾಸ್ತುಹೋಮ, ಪಂಚಗವ್ಯಾರಾಧನೆ, ಪಂಚಗವ್ಯ ಪ್ರೋಕ್ಷಣೆ, ಪರ್ಯಗ್ನಿಕರಣ, ನಿತ್ಯಹೋಮ, ಕಲಶಸ್ಥಾಪನೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಜೂನ್ 25 ರಂದು ಬೆಳಗ್ಗೆ 7 ರಿಂದ ಸ್ವಸ್ತಿವಾಚನ, ಕಲಶಾರಾಧನೆ, ನಿತ್ಯಹೋಮ, ಧ್ವಜಗಾಯತ್ರಿ ಹೋಮ, ಅಷ್ಟಾವದಾನ ಸೇವೆ, ಮಹಾ ನಿವೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.