ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂಗೆಡ್ಡೆಗೆ ಪರ್ಯಾಯ ಬೆಳೆ ಬೆಳೆಯಲು ಪಟೇಲ್ ಶಿವರಾಂ ಸಲಹೆ

Mainashree
Updated On : 18 Jun 2014, 9:04 am

ಹಾಸನ: ಆಲೂಗೆಡ್ಡೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ರೋಗದ ಬಾಧೆ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ವಿಧಾನಪರಿಷತ್ ಸದಸ್ಯ  ಪಟೇಲ್ ಶಿವರಾಂ ರೈತರಿಗೆ ಸಲಹೆ ನೀಡಿದರು.
 ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ ವತಿಯಿಂದ ಹಾಸನ ಜಿಲ್ಲಾ ಆಲೂಗೆಡ್ಡೆ ಬೆಳೆಗಾರರಿಗೆ ಹಾಗೂ ರೈತ ಬಾಂಧವರಿಗೆ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಆಲೂಗೆಡ್ಡೆ ಬೆಳೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಧನಕ್ಕೆ ಮನವಿ:  ಆರೋಗ್ಯ ವತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ  ಎ.ಬಿ.ಲಕ್ಷ್ಮಣ ಗೌಡ ಮಾತನಾಡಿ, ಆಲೂಗೆಡ್ಡೆ ಬೆಳೆಗಾರರು ಇತ್ತೀಚಿನ ದಿನಗಳಲ್ಲಿ ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅನೇಕ ಬೆಳೆಗಾರರು ಸಾಲಗಾರರಾಗಿರುತ್ತಾರೆ.  ಸರ್ಕಾರಹೆಚ್ಚಿನ ಸಹಾಯಧನ ನೀಡಬೇಕಾಗಿ ತಿಳಿಸಿದರು.  
 ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಹಾಗೂ ಪ್ರಗತಿ ಪರ ರೈತ  ದೇವೇಗೌಡ ಮಾತನಾಡಿ, ಅಂಗಮಾರಿ ರೋಗಕ್ಕೆ ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಕುಪ್ರಿ ಸೂರ್ಯ ಮತ್ತು ಕುಪ್ರಿ ಪುಕ್ ರಾಜ್ ಇವುಗಳನ್ನು ಇಲಾಖಾ ಮಾರ್ಗದರ್ಶನದಂತೆ ಬೆಳೆಯುವಂತೆ ತಿಳಿಸಿದರು.
 ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ  ವಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಕುಂಠಿತವಾಗಿದೆ ಎಂದು ವಿಷಾದಿಸಿದರು. ಕಾರೆಕೆರೆ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಿದ್ದಗಂಗಯ್ಯ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ  ಡಾ. ಬಸವರಾಜು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement