ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಿನರ್ವಮಿಲ್; ಮುಷ್ಕರ ವಾಪಸ್

Mainashree
Updated On : 19 Jun 2014, 8:44 am

ಹಾಸನ: ಕಳೆದ ಒಂದು ತಿಂಗಳಿನಿಂದ ವಿವಿಧ ಬೇಡಿಕೆ ಈಡೇರಿಸುವಂತೆ ನ್ಯೂ ಮಿನರ್ವಮಿಲ್ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.
 ಕಾರ್ಮಿಕ ಆಯುಕ್ತರ ಜತೆ ಚರ್ಚೆ ಮಾಡಿ ಬೇಡಿಕೆ ಈಡೇರಿಸುವ ಭರವಸೆಯೊಂದಿಗೆ ತಾತ್ಕಲಿಕವಾಗಿ ಮುಷ್ಕರ ಕೈಬಿಟ್ಟು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ.
ವೇತನ ಹೆಚ್ಚಿಸಿ: ತಾಲೂಕಿನ ಹನುಮಂತಪುರ ಗ್ರಾಮದಲ್ಲಿರುವ ನ್ಯೂ ಮಿನರ್ವ ಕಾರ್ಖಾನೆಯ ಹಲವು ಬೇಡಿಕೆಗಳಾದ ಕಾರ್ಮಿಕರಿಗೆ ಖಾಯಂ ನೇಮಕಾತಿ ಮಾಡಿಕೊಂಡು ವೇತನ, ಭತ್ಯೆ ಹೆಚ್ಚಿನ ರೀತಿಯಲ್ಲಿ ನೀಡುವಂತೆ ಒತ್ತಾಯಿಸಿದರು.
 ಪ್ರಸ್ತುತದಲ್ಲಿ ಇರುವ ಕಾರ್ಮಿಕರ ಸಮಿತಿ ಬದಲಾಯಿಸಿ, ಅವರ ಸುರಕ್ಷತೆಗಾಗಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಹಾಗೂ ನಾನಾ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ವಿಚಾರವಾಗಿ ಕಾರ್ಖಾನೆ ಆಡಳಿತದೊಂದಿಗೆ ಅನೇಕ ಬಾರಿ ಚರ್ಚೆ ನಡೆದು ವಿಫಲವಾಗಿತ್ತು.
 ಕಂಪನಿ ಮುಖ್ಯಸ್ಥರು ಸಭೆ ಮಾಡಿ ಜೂ. 26 ರಂದು ಕಾರ್ಮಿಕ ಆಯುಕ್ತರ ಜತೆ ಚರ್ಚೆ ಮಾಡಿ ಬೇಡಿಕೆ ಈಡೇರಿಸುವುದಾಗಿ ಹೇಳಿದ ಬಳಿಕ ಕಾರ್ಮಿಕರು ತಾತ್ಕಾಲಿಕವಾಗಿ ಮುಷ್ಕರ ಕೈಬಿಟ್ಟಿದ್ದಾರೆ. ಕಾರ್ಮಿಕರ ಬೇಡಿಕೆ ಈಡೇರದಿದ್ದರೇ ಮತ್ತೆ ನಮ್ಮ ಹೋರಾಟ ಮುಂದುವರೆಸುವುದಾಗಿ ಮುಷ್ಕರ ನಿರತರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement