ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾವಯವ ಭಾಗ್ಯ ಯೋಜನೆಯಡಿ ಪ್ರವಾಸ

Mainashree
Updated On : 19 Jun 2014, 8:44 am

ಬೇಲೂರು: ತಾಲೂಕಿನ ಶೆಟ್ಟಿಗೆರೆ ಸಾವಯವ ಕೃಷಿಕರ ಸಮಿತಿ, ಬೇಲೂರಿನ ಸಹಾಯಕ ಕೃಷಿ ನಿರ್ದೇಶಕರು ಮತ್ತು ಜನ ಸ್ಪಂದನ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ತಾಲೂಕಿನ ಕಸಬಾ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿ ಸಾವಯವ ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ಉತ್ಪಾದನಾ ಆಧಾರಿತ ಅಧ್ಯಯನ ಪ್ರವಾಸ ವನ್ನು ಕೈಗೊಳ್ಳಲಾಯಿತು.
 ಈ ಪ್ರವಾಸದಲ್ಲಿ ಶಿವಮೊಗ್ಗದ ನವಿಲೆಯಲ್ಲಿಸಾವಯವ ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಎರೆಹುಳು ಘಟಕ, ಮತ್ತು ಜಪಾನ್ ಮಾದರಿಯ ಕಾಂಪೋಸ್ಟ್ ಘಟಕ, ಅಜೋಲಾ ತೊಟ್ಟಿ, ಬಯೋಟೆಸ್ಟರ್ ಮತ್ತು ಪಶುಪಾಲನೆ ಹಾಗೂ ಜೇನು ಸಾಕಾಣಿಕೆ ಮತ್ತು ವೀಠಲಾಪುರದ ಸಾವಯವ ಪ್ರಗತಿಪರ ರೈತರಾದ ವೀರಣ್ಣರವರ ತೋಟಕ್ಕೆ ಭೇಟಿ ನೀಡಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.  
  ಈ ಸಂದರ್ಭದಲ್ಲಿ  ಜನಸ್ಪಂದನ ಡೆವಲಪ್‌ಮೆಂಟ್ ಸೊಸೈಟಿ ಕ್ಷೇತ್ರಾಧಿಕಾರಿ ತೀರ್ಥ ಕುಮಾರ್, ಕ್ಷೇತ್ರ ಸಹಾಯಕರಾದ ಆಶಾ ಹಾಗೂ ಇತರರು ಪ್ರವಾಸಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement