ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನಿಯಮಿತ ವಿದ್ಯುತ್ ಬಿಜೆಪಿ ಪ್ರತಿಭಟನೆ

Mainashree
Updated On : 21 Jun 2014, 10:29 am

ಅರಸೀಕೆರೆ: ಅನಿಯಮಿತ ವಿದ್ಯುತ್ ನಿಲುಗಡೆಯನ್ನು ಖಂಡಿಸಿ ತಾಲೂಕು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪಟ್ಟಣದ ಸೆಸ್ಕಾಂ ಕಚೇರಿ ಎದುರು ಶನಿವಾರ ಧರಣಿ ನಡೆಸಿ ಪ್ರತಿಭಟಿಸಿದರು.
 ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಸಮರ್ಪಕ ವಿದ್ಯುತ್ ವಿತರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸೆಸ್ಕಾಂ ಕಚೇರಿಗೆ ತಲುಪಿದ ಕಾರ್ಯಕರ್ತರು ಕಚೇರಿ ಎದುರು ಧರಣಿ ನಡೆಸಿದರು.
ನೀರಿಗೆ ತತ್ವಾರ: ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿ ತಿಂಗಳುಗಳೇ ಕಳೆಯುತ್ತಾ ಬಂದಿದ್ದರೂ ಬದಲಾಯಿಸದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇದಕ್ಕೆ ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿವಿಟಿ ಬಸವರಾಜು, ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ವೈ.ಕೆ.ದೇವರಾಜ್ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ರಾಜ್ಯ ನಾಯಕ ವಿಜಯ್ ವಿಕ್ರಮ್, ತಾ ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಜಿ.ಜಿ.ಲೋಕೇಶ್, ಜಿಪಂ ಸದಸ್ಯ ಕೃಷ್ಣನಾಯಕ್, ತಾಪಂ ಸದಸ್ಯ ಬಿ.ಆರ್.ಜಯಣ್ಣ, ಎಪಿಎಂಸಿ ಸದಸ್ಯ ಡಿ.ಬಿ.ಗಂಗಾಧರ್, ಮಾಜಿ ಪುರಸಭಾ ಸದಸ್ಯ ಮುರುಳಿ, ಮಾಜಿ ಸದಸ್ಯ ಮಲ್ಲಯ್ಯ, ವಕೀಲ ಯತೀಶ್, ಪ್ರಭಾಕರ, ಹೊಳೆಯಪ್ಪ, ರಾಂಪುರ ರಮೇಶ್, ಮಾಗೇನಹಳ್ಳಿ ನಾಗರಾಜ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement