ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಪಂ ಉಪಾಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ

Vishwanath S
Updated On : 21 Jun 2014, 12:09 pm

ರಾಮನಾಥಪುರ: ಸಮೀಪದ ಹುಲ್ಲಿಕಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಿಯಾರು ಗ್ರಾಮದಲ್ಲಿ ಹಾಡಹಗಲೇ ಸ್ಥಳೀಯ ಪಂಚಾಯ್ತಿ ಉಪಾಧ್ಯಕ್ಷ ನಯಾಜ್ ಅಹಮ್ಮದ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದು ತಾಲೂಕಿನ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇದೇ ಊರಿನ ಲತಿಫ್ ಸಾಹೇಬ್ ಮತ್ತು ಖುರ್ಷಿದ್ ಭಾನು ದಂಪತಿ ಪುತ್ರಿ ತೌವಿದ್ ಪಾಷ ಎಂಬಾತ ಅದೇ  ಗ್ರಾಮದ  ವಿಧವೆಯೊಬ್ಬಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ. ಈಕೆಯಿಂದ ಛೀಮಾರಿ ಕೂಡ ಹಾಕಿಸಿಕೊಂಡಿದ್ದನು. ಈ ದ್ವೇಷಕ್ಕೆ ತನ್ನ ಮೊಬೈಲ್‌ನಿಂದ ವಿಧವೆ ಅಶ್ಲೀಲ ಭಾವಚಿತ್ರವನ್ನು ಮೊಬೈಲ್‌ನಿಂದ ತೆಗೆದಿರುವುದಾಗಿ ಮತ್ತು ಈಕೆ ಮಾನ  ಹರಾಜು ಮಾಡುವುದಾಗಿ ಬರಗೂರು ರಘು, ಕಣಿಯಾರು ದಿನೇಶ, ಕಾಂತರಾಜು ಎಂಬುವವರೊಂದಿಗೆ ಹೇಳಿಕೊಂಡಿದ್ದರು.
ಉಡಾಫೆ ವರ್ತನೆ: ಈ ವಿಚಾರವಾಗಿ ನೊಂದ ವಿಧವೆ ಮತ್ತು ಈಕೆಯ ಪೋಷಕರು ತಮ್ಮ ಗ್ರಾಮದಲ್ಲಿನ ಗ್ರಾಮಸ್ಥರನ್ನು ನ್ಯಾಯಪಂಚಾಯಿತ್ತಿಗೆ ಸೇರಿಸಿ, ಪಂಚಾಯ್ತಿಯವರು ತೌವಿದ್ ಪಾಷನಿಗೆ ನಿನ್ನ ಮೊಬೈಲ್‌ನಿಂದ ತೆಗೆದಿರುವ ಈಕೆಯ ಅಶ್ಲೀಲ ಭಾವಚಿತ್ರಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲಾಗಿದೆ. ಆಗ ತೌವಿದ್‌ಪಾಷ ಉಡಾಫೆಯಿಂದ ವರ್ತಿಸಿದ್ದ. ಆದ್ದರಿಂದ ಪಂಚಾಯ್ತಿ ಉಪಾಧ್ಯಕ್ಷ ನಯಾಜ್ ಅಹಮ್ಮದ್ ಈ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ವಿಧವೆ ಪೋಷಕರಿಗೆ ತಿಳಿಸಿದರು. ಸ್ಥಳೀಯ ಕೊಣನೂರು ಠಾಣೆಯಲ್ಲಿ ಈ ವಿಚಾರವಾಗಿ ದೂರು ದಾಖಲಾಗಿದೆ.
ಹಗೆತನ: ಇದರಿಂದ ಆಕ್ರೋಶಗೊಂಡು ತನ್ನ ಜಮೀನಿನ ಕಡೆ ಹೊರಟಿದ್ದ ಪಂಚಾಯ್ತಿ ಉಪಾಧ್ಯಕ್ಷ ನಯಾಜ್ ಅಹಮ್ಮದ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಾದಿಕ್, ಮುಸ್ತಾಫ್, ತೌವಿದ್ ಪಾಷ  ಹಾಡಹಗಲೇ ಗ್ರಾಮದ ಚೆಲುವೆಗೌಡರ ಅಂಗಡಿ ಬಳಿ ಅಡ್ಡಗಟ್ಟಿ ಸಿನಿಮೀಯ ರೀತಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ನಯಾಜ್ ಅಹಮ್ಮದ್ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಹಾಸನದ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಗೆ ಯತ್ನಕ್ಕೆ ಸಂಬಂಧಿಸಿದಂತೆ ಕೊಣನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ನಗರದ ತಣ್ಣೀರುಹಳ್ಳದ ತೋಟಗಾರಿಕೆ ಇಲಾಖೆಯ ವಸತಿ ಸಮುಚ್ಛಯದ ವಾಸಿ ಬೋರಣ್ಣಗೌಡ ಎಂಬವರ ಪುತ್ರಿ ಸಹನ (21)ಮನೆಯಿಂದ ಹೋದವಳು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.  ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ದೃಢಕಾಯ ಶರೀರ, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಚೂಡಿದಾರ ಧರಿಸಿದ್ದರು ಎಂದು ತಂದೆ ಬೋರಣ್ಣಗೌಡ ಠಾಣೆಗೆ ದೂರು ನೀಡಿದ್ದಾರೆ. ಈಕೆ ಬಗ್ಗೆ ಮಾಹಿತಿ ಇದ್ದವರು ದೂ. 08172- 268333 ಸಂಪರ್ಕಿಸಲು ಕೋರಲಾಗಿದೆ.
ಅತ್ಯಾಚಾರ ಮೂವರ ಬಂಧನ
ಸಕಲೇಶಪುರ: ಬುದ್ಧಿಮಾಂದ್ಯೆ ಯುವತಿಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಮೂವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಅನ್ಸರ್, ಮೂರ್ತಿ ಮತ್ತು ಮಂಜು ಬಂಧಿತ ಆರೋಪಿಗಳು. ಇವರು ಬುದ್ಧಿಮಾಂದ್ಯೆ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ್ಡಿದ್ದರೆನ್ನಲಾಗಿದೆ.
 ಪರಿಣಾಮ ಯುವತಿ ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಬುದ್ಧಿಮಾಂದ್ಯ ಯುವತಿ ಮಗುವಿಗೆ ಜನ್ಮ ನೀಡಿದ ನಂತರ ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿಕೊಂಡಿದ್ದ ಪಟ್ಟಣ ಠಾಣೆ ಪೊಲೀಸರು ಯುವತಿ ಆರೋಗ್ಯದ ದೃಷ್ಟಿಯಿಂದ ಆರೋಪಿಗಳ ಮುಖ ಚಹರೆ ಪತ್ತೆ ಕಾರ್ಯ ಸ್ಥಗಿತಗೊಳಿಸಿದ್ದರು. ವೈದ್ಯರು ಯುವತಿ ಮಾನಸಿಕ ಸ್ಥಿತಿ ಉತ್ತಮವಾಗಿದೆ ಎಂದು ದೃಢೀಕರಿಸಿದ ನಂತರ ವಿಚಾರಣೆಯನ್ನು ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದಿನಿಂದಲೂ ಇವಳನ್ನು ಲೈಂಗಿಕವಾಗಿ  ಬಳಸಿಕೊಳ್ಳುತ್ತಿದ್ದರೆಂದು ತಿಳಿದು ಬಂದಿದ್ದು, ಮೂವರನ್ನು ಯುವತಿ ಗುರುತಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement