ಚಿತ್ರಕಲೆಯಿಂದ ಬದುಕು ಕಟ್ಟಿಕೊಳ್ಳಿ: ಶಿವಪ್ರಸಾದ್
ಹಾಸನ: ಇಂದಿನ ಯುವಕರು ಚಿತ್ರ ಕಲೆಯನ್ನು ದುಡಿಯುವ ಮಾರ್ಗವಾಗಿ ಬಳಸಿಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಹೇಳಿದರು.
ಕುವೆಂಪು ನಗರದಲ್ಲಿ ಚಿತ್ರ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಆನತೆಯಲ್ಲಿ ಚಿತ್ರ ಕಲೆ ಎಂದರೆ ಕೇವಲ ಚಿತ್ರ ಬಿಡಿಸುವುದು, ಇದರಿಂದ ದುಡಿಮೆ ಆದಾಯ ಇಲ್ಲ ಎಂಬ ಮನೋಭಾವ ಇದೆ. ಆದರೆ ಚಿತ್ರಕಲೆ ಇಂದು ಉದ್ಯಮವಾಗಿ ಬೆಳೆದಿದೆ. ಪೇಯಿಂಟಿಂಗ್‌ಗಳು ಕೋಟ್ಯಂತರ ರು. ಗೆ ಮಾರಾಟವಾಗುತ್ತಿವೆ ಎಂದರು.
ಚಿತ್ರ ಕಲಾವಿದರು ಕೇವಲ ಚಿತ್ರ ಕಲಾ ಶಿಕ್ಷಕರಾಗುತ್ತಿದ್ದಾರೆ. ಅದರಾಚೆ ಅವರು ನೋಡಬೇಕು. ಜನರು ಚಿತ್ರಕಲಾ ಕೃತಿಗಳನ್ನು ಕೊಂಡಿಟ್ಟು ಮಾರುವ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದರು. ನಿರ್ಮಲ ಚಿತ್ರಕಲಾ ಮಹಾವಿದ್ಯಾಲಯ ದ ಆರ್.ಸಿ. ಕಾರದಕಟ್ಟಿ, ನಗರಸಭೆ ಸದಸ್ಯ ಸುರೇಶ್ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಆರ್ಟ್‌ವರ್ಲ್ಡ್ ಉದ್ಘಾಟನೆ ನೆರವೇರಿಸಿದರು. ಸುಮಾರು 5 ಕ್ಕೂ ಹೆಚ್ಚು ಕಲಾವಿದರಿಂದ ಚಿತ್ರ ಕಲಾ ಪ್ರದರ್ಶನ ನಡೆಯಿತು. ಕಲಾವಿದರಾದ ಹೇಮಂತ್, ಸೋಮು, ರಮೇಶ್, ಧನುಷ್, ರವಿ ಇದ್ದರು.