ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಠ್ಯದ ಜೊತೆ ಕ್ರೀಡೆ ಸಾಮಾನ್ಯ ಜ್ಞಾನ ಅಗತ್ಯ

Mainashree
Updated On : 22 Jun 2014, 8:59 am

ಬೇಲೂರು: ಐಎಎಸ್ ಪಾಸ್ ಮಾಡಲು ಪಠ್ಯದೊಂದಿಗೆ ಕ್ರೀಡೆ ತೀರಾ ಅಗತ್ಯ ಎಂದು ಇತ್ತೀಚೆಗೆ ಐಎಎಸ್‌ನಲ್ಲಿ ತೇರ್ಗಡೆಯಾಗಿರುವ ಬೇಲೂರಿನ ಕೆಎಂ.ಶ್ರೇಯಸ್ ಅಭಿಪ್ರಾಯಪಟ್ಟರು.
 ಸುದ್ದಿಗಾರರೊಂದಿಗೆ ಮಾತನಾಡಿ, ಇಂಟರ್ ವ್ಯೂನಲ್ಲಿ ಕ್ರೀಡೆಯ ಬಗ್ಗೆಯೆ ಪ್ರಶ್ನೆ ಕೇಳಲು ಒಬ್ಬರು ಇದ್ದರು. ದೇಶ, ವಿದೇಶ ಸಮಾಚಾರ, ಇತಿಹಾಸ, ರಾಜಕೀಯ, ಸಾಹಿತ್ಯ, ಸಾಹಿತಿಗಳ ಪರಿಚಯದೊಂದಿಗೆ ಸೋಷಿಯಲ್ ವರ್ಕ್ ಬಗ್ಗೆ ಆಸಕ್ತಿ ಇವುಗಳಿರಬೇಕು ಎಂದು ಅವರು ಹೇಳಿದರು.
 ಪಠ್ಯದೊಂದಿಗೆ ಇನ್ನಿತರ ವಿಷಯಗಳ ಅರಿವು ಇದಿಲ್ಲದಿದ್ದರೆ ನಾನು ಖಂಡಿತಾ ಐಎಎಸ್ ಪಾಸು ಮಾಡಲು ಆಗುತ್ತಿರಲಿಲ್ಲ. ಕಾಲೇಜು ಹಂತದಲ್ಲಿಯೂ ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್ ಇತ್ಯಾದಿ ಆಟಗಳನ್ನ ಆಡುತ್ತಿದ್ದೆ, ಈಗ ವಾರದಿಂದ ಒಂದು ದಿನವೂ ಆಟವಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏನೆಲ್ಲಾ ಸಾಧನೆ ಮಾಡುವಾಗ 20 ರಿಂದ 29 ರವರಗಿನ ವಯಸ್ಸಿನ ಅಂತರದಲ್ಲಿರಬೇಕು. ಪ್ರಯತ್ನ ಮುಂದುವರಿಸಬೇಕು. ಯಾವುದನ್ನೂ ಆಗುವುದಿಲ್ಲ ಎನ್ನಬಾರದು. ವೈಡ್ ರೀಡಿಂಗ್ ಇರಬೇಕು. ಐಎಎಸ್ ಆಫೀಸರ್‌ಗಿಂತ ಆತನಲ್ಲಿ ವ್ಯಕ್ತಿತ್ವ ಇರಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement