ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೊಳ್ಳೆ ನಿಯಂತ್ರಿಸಿ, ಮಲೇರಿಯಾ ತಡೆಗಟ್ಟಿ

Mainashree
Updated On : 22 Jun 2014, 8:59 am

ಹಾಸನ:  ಪ್ರತಿ ವರ್ಷ ಜೂನ್‌ನಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಿ ಈ ರೋಗವನ್ನು ನಿಯಂತ್ರಣದಲ್ಲಿಡುವುದೇ ಮಾಸಾಚರಣೆಯ ಉದ್ದೇಶವಾಗಿದೆ ಎಂದು  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎನ್.ಎನ್. ರಾಜ್ ಗೆಪಾಲ್ ತಿಳಿಸಿದ್ದಾರೆ.  ಸೋಂಕಿತ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗ ಮಲೇರಿಯಾ. ಸೋಂಕಿತ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ 5ರಿಂದ 10 ದಿನಗಳಲ್ಲಿ ಆ ವ್ಯಕ್ತಿಗೆ ರೋಗ ಹರಡುತ್ತದೆ ಎಂದು ಹೇಳಿದ್ದಾರೆ.
ರಕ್ತ ಪರೀಕ್ಷೆ ಮಾಡಿಸಿ: ಚಳಿ ಜ್ವರ, ಸ್ವಲ್ಪ ಹೊತ್ತಿನ ನಂತರ ಮೈಬೆವರುವುದು, ತಲೆ ನೋವು, ಮೈಕೈನೋವು, ಕೆಲವರಿಗೆ ವಾಂತಿ ನಂತರ  ನಿಶ್ಯಕ್ತಿ ಈ ಲಕ್ಷಣಗಳು ಪ್ರತಿದಿನ ಅಥವಾ ದಿನಬಿಟ್ಟು  ದಿನ ಬರಬಹುದು.
ರೋಗಿಯ ರಕ್ತ ಪರೀಕ್ಷೆಯ ನಂತರವೇ ಈ ರೋಗದ ಖಚಿತತೆ ಸಾಧ್ಯ. ಹೀಗಾಗಿ ಯಾವುದೇ ಜ್ವರ ಇರಲಿ ಶೀಘ್ರವಾಗಿ ರಕ್ತ ಪರೀಕ್ಷೆಯನ್ನು ಹತ್ತಿರದ ಆಸ್ಪತ್ರೆಯಲ್ಲಾಗಲಿ ಅಥವಾ ಆರೋಗ್ಯ ಸಿಬ್ಬಂದಿಯಿಂದಾಗಲಿ ಮಾಡಿಸಿಕೊಂಡು ಮಲೇರಿಯಾ ಇದೆಯಾ ಇಲ್ಲವೋ ಎಂದು ಖಚಿತಪಡಿಸಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸೊಳ್ಳೆಗಳ ನಾಶ: ರೋಗ ವಾಹಕ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಪರಿಸರ ಸ್ನೇಹಿ ಉಪಾಯ ಜೈವಿಕ ನಿಯಂತ್ರಣ ವಿಧಾನ ಇದರಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾಹಾರಿ ಮೀನುಗಳನ್ನು ಉಪಯೋಗಿಸುತ್ತಾರೆ. ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳ ಲಾರ್ವಾ ಮತ್ತು ಪ್ಯೂಪ ಹಂತಗಳನ್ನು ಸೊಳ್ಳೆಗಳಾಗಿ ಬೆಳೆಯುವ ಮುಂಚೆಯೇ ಆಹಾರವಾಗಿ ತಿನ್ನುವ ಮೀನುಗಳನ್ನು ಲಾರ್ವಾಹಾರಿ ಮೀನುಗಳೆಂದು ಕರೆಯುತ್ತಾರೆ.
 ಮಲೇರಿಯಾ ರೋಗ ಹರಡುವ ಸೊಳ್ಳೆಗಳ ಪ್ರಮುಖ ಉತ್ಪತ್ತಿ ತಾಣಗಳಾದ ಕೆರೆ, ಬಾವಿ, ಹಳ್ಳ, ನದಿ, ಚೆಕ್ ಡ್ಯಾಂ ಇವುಗಳಲ್ಲಿ ಲಾರ್ವಾಹಾರಿ ಮೀನುಗಳಾದ ಗಪ್ಪಿ ಅಥವಾ ಗ್ಯಾಂಬೂಸಿಯಾ ಮೀನುಗಳನ್ನು ಬಿಟ್ಟು ಸೊಳ್ಳೆ ಸಂತಾನ ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.  ವಿವರಗಳಿಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಲಗಾಮೆ ರಸ್ತೆ, ಹಾಸನ, ದೂರವಾಣಿ 081072-246828 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement