ಯುವತಿಗೆ ನಂಬಿಸಿ ವಂಚನೆ: ದೂರು
ರಾಮನಾಥಪುರ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಗರ್ಭಿಣಿಯಾದ ಬಳಿಕ ವಂಚಿಸಿರುವ ಘಟನೆ ಕೊಣನೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದಿಂದ ಕೊಣನೂರು ಹೋಬಳಿ ಚಿಕ್ಕಳ್ಳಿಯ ಯುವತಿಯನ್ನು ಮಲ್ಲಿಪಟ್ಟಣ ಹೋಬಳಿ ಮಲ್ಲಪ್ಪನಹಳ್ಳಿಯ ಇಂದುಕುಮಾರ್ (24) ಪ್ರೀತಿಸುತ್ತಿದ್ದ. ಈಗ ಈಕೆ 6 ತಿಂಗಳ ಗರ್ಭಿಣಿಯಾಗಿದ್ದು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯುವತಿಗೆ ಗರ್ಭಪಾತ ಮಾಡಿಸಿಕೊಂಡು ಬೇರೆ ಮದುವೆಯಾಗುವಂತೆ ರು. 3 ಲಕ್ಷ ನೀಡುವುದಾಗಿ ಇಂದು ಕುಮಾರ್ ಆಮಿಷ ಒಡ್ಡಿದ್ದಾನೆ. ಈ ಸಂಬಂಧವಾಗಿ ಯುವತಿಯು ತನ್ನ ತಾಯಿಯೊಂದಿಗೆ ಕೊಣನೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.