ವೀಡಿಯೋ ಸಂವಾದಕ್ಕೆ ಅಧಿಕಾರಿಗಳೇ ಗೈರು
ಅರಸೀಕೆರೆ: ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುವುದಕ್ಕೆ ಆಹಾರ ಇಲಾಖೆ ಇಲ್ಲಿ ಆಯೋಜಿಸಿದ್ದ ವಿಡಿಯೋ ಸಂವಾದ ಕಾರ್ಯಕ್ರಮ ಸಾಕ್ಷಿಯಾಯಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಹಾರ ಇಲಾಖೆ ಇತ್ತೀಚೆಗೆ ಪಟ್ಟಣದ ಪುರಸಭೆ ಸದಸ್ಯರು, ತಾಪಂ ಸದಸ್ಯರಿಗಾಗಿ ವಿಡಿಯೋ ಸಂವಾದ ಕಾರ್ಯಕ್ರಮಕ್ಕೆ ಇಲಾಖೆ ಅಧಿಕಾರಿಗಳ ಸಕಾಲಕ್ಕೆ ನೀಡದ ಮಾಹಿತಿ ಕೊರತೆಯೋ ಅಥವಾ ಚುನಾಯಿತ ಸದಸ್ಯರ ಉದಾಸೀನತೆಯ ಮನೋಭಾವನೆಯೋ ನಿಗದಿಯಂತೆ ಬೆಳಗ್ಗೆ 11 ಕ್ಕೆ ಕಾರ್ಯಕ್ರಮ ಆರಂಭವಾದರೂ ಅಲ್ಲಿಯೇ ತಾಪಂ ಹಂಗಾಮಿ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅನೇಕ ತಾಪಂ ಸದಸ್ಯರಾಗಲಿ ಅಥವಾ ಕ್ಷೇತ್ರದ ಶಾಸಕರಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಹಾಜರಾಗದಿದ್ದುದೂ ಇವರ ಜನಪರ ಕಾಳಜಿಗೆ ಉದಾಹರಣೆಯಾಗಿತ್ತು.
ಸಭಾಂಗಣದ ಅಲ್ಲಲ್ಲಿ ಎಲ್ಇಡಿ ಸ್ಕ್ರೀನ್ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಿದ್ದರೆ ಇತ್ತ ಚುನಾಯಿತ ಜನಪ್ರತಿನಿಧಿಗಳಿಗೆ ಹಾಕಿದ್ದ ಆಸನದಲ್ಲಿ ಆಹಾರ ಇಲಾಖೆಯ ಶಿರಸ್ತೆದಾರ್ ಗಂಗಾಧರಯ್ಯ ಹಾಗೂ ನಿರೀಕ್ಷಕ ಧರ್ಮಪ್ಪ ಹೊರತು ಪಡಿಸಿದರೆ ಬೇರಾರೂ ಇರಲಿಲ್ಲ.