ಸಂಘಟನೆ ಇಲ್ಲದೆ ಸಾಧನೆ ಅಸಾಧ್ಯ
ಹಾಸನ: ನಗರದ ಎಂಜಿ. ರಸ್ತೆ ಬಳಿ ಜಿಲ್ಲಾ ಕ್ರಿಡಾಂಗಣದ ಬಳಿ ನಿರ್ಮಿಸಲಾಗಿರುವ ನೂತನ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘವನ್ನು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಪಾದ ಪೂಜೆ ಕಾರ್ಯಕ್ರಮದ ನಂತರ ಉದ್ದೇಶಿಸಿ ಮಾತನಾಡಿ, ಎಲ್ಲಾ ಕಡೆ ಹಲವು ಸಂಘಗಳಿವೆ. ಆದರೇ ಮಹಿಳಾ ಸಂಘ ತೀರ ಕಡಿಮೆ ಇದೆ ಎಂದು ಹೇಳಿದರು.
ಸಂಘಟನೆ ಮುಖ್ಯ: ಎಲ್ಲಾ ಜೀವಿಗಳಲ್ಲಿ ಮನುಷ್ಯ ಶ್ರೇಷ್ಠವಾದುದ್ದು. ಆದರೆ ಮಾನವನು ತನ್ನೊಳಗೆ ಕೆಟ್ಟದು ಮತ್ತು ಒಳ್ಳೆಯದು ಎರಡು ಇಟ್ಟುಕೊಂಡಿದ್ದಾನೆ. ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ಆರಿಸಿಕೊಂಡರೇ ಆಗ ಮನುಷ್ಯನಾಗುತ್ತಾನೆ. ಯಾವುದೇ ಸಮುದಾಯವಾಗಲಿ ಸಂಘಟನೆ ಇಲ್ಲದೆ ಸಾಧನೆ ಮಾಡಲು ಅಸಾಧ್ಯ ಅವರು ಎಂದು ಕಿವಿಮಾತು ಹೇಳಿದರು.
ಮನುಷ್ಯನಾದವನು ಭಕ್ತಿಯನ್ನು ಅಳವಡಿಸಿಕೊಂಡರೇ ಮುಂದೆ ಅವರ ಜೀವನ ಉತ್ತಮವಾಗಿರುತ್ತದೆ ಎಂದು ಹೇಳಿದರು. ಇದೇ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಹೇಮಲತಾ ಕಮಲ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ಇತರರು ಇದ್ದರು.