ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಚ್ಛತೆ ಕಾಪಾಡಿ ಮಲೇರಿಯಾದಿಂದ ದೂರವಿರಿ

Mainashree
Updated On : 23 Jun 2014, 9:39 am

ಹೊಳೆನರಸೀಪುರ: ಮಲೇರಿಯಾ ಇತ್ತೀಚಿನ ದಿನಗಳಲ್ಲಿ ಅತ್ಯಂತ ಮಾರಕ ರೋಗವಾಗಿ ಪರಿಣಮಿಸಿದ್ದು, ವಿಶ್ವದಲ್ಲಿ ಪ್ರತಿ ಒಂದು ನಿಮಿಷಕ್ಕೆ ಒಂದು ಮಗು ಈ ರೋಗಕ್ಕೆ ಬಲಿಯಾಗುತ್ತಿದೆ ಎಂದು ಇಲ್ಲಿನ ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ಆತಂಕ ವ್ಯಕ್ತಪಡಿಸಿದರು.
ತಾಲೂಕು  ಆರೋಗ್ಯಾಧಿಕಾರಿಗಳ ಕಚೇರಿ, ಪಟ್ಟಣದ ಸ್ವರ್ಣ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಮಲೇರಿಯಾ ವಿರುದ್ಧ ಮಾಸಾಚರಣೆ ಜಾಥಾವನ್ನು ನಡೆಸಿದ ನಂತರ ಸ್ವರ್ಣ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.  
ಸ್ವಚ್ಛತೆ ಕಾಪಾಡಿ: ಜೂನ್‌ನಲ್ಲಿ ಮಳೆ ಪ್ರಾರಂಭವಾಗುವುದರಿಂದ ಹೊಂಡಗಳಲ್ಲಿ, ಎಳನೀರಿನ ಬುರುಡೆಗಳಲ್ಲಿ, ಚಿಪ್ಪಿನ ಕರಟೆಗಳಲ್ಲಿ, ಹಳೆಯದಾದ ಟೈರುಗಳಲ್ಲಿ, ಒಡೆದ ಗಾಜುಗಳಲ್ಲಿನ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳಾಗಿ ಮಾರ್ಪಾಡಾಗುವುದರಿಂದ ಮಲೇರಿಯಾ ರೋಗ ಬಾರದಂತೆ ಮುಂಜಾಗ್ರತೆ ವಹಿಸುವ ಸಲುವಾಗಿ ಪ್ರತಿಯೊಬ್ಬರೂ ಸಹ ತಮ್ಮ ಮನೆಯ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಮಲೇರಿಯಾ ರೋಗ ಬಾರದ ಹಾಗೆ ತಡೆಗಟ್ಟಲು ಸಾಧ್ಯವಾಗುತ್ತದೆಂದರು.
ಮುಖ್ಯ ಅತಿಥಿಗಳಾಗಿ ಮಾನಸ ಪದವಿ ಪೂರ್ವ ಾಲೇಜಿನ ಪ್ರಾಂಶುಪಾಲರಾದ ಲೋಕೇಶ್ ಮಾನಾಡಿ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದರಿಂದ ಮಲೇರಿಯಾ ಬಾರದಂತೆ ಯಂತ್ರಿಸಿಕೊಳ್ಳಬಹುದೆಂದರು. ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೇವರಾಜು ಮಾತನಾಡಿ, ಪ್ರತಿಯೊಬ್ಬರೂ ಸಹ ತಮ್ಮ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಂಡರೆ ಸಮಾಜಕ್ಕೆ ನಾವು ಅಪಾರ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಮಲೇರಿಯಾ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ಎನ್.ಎಸ್. ಸಂಜನಾ-ಪ್ರಥಮ, ಎಚ್.ಎಸ್.ಹಿಮಬಿಂದು- ದ್ವಿತೀಯ, ಹಾಗೂ ಚೇತನ್-ತೃತೀಯ ಬಹುಮಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement