6 ಸಾವಿರ ಭ್ರಷ್ಟಾಚಾರ ಪ್ರಕರಣ ಇತ್ಯರ್ಥ
ಬೇಲೂರು: ರಾಜ್ಯದಲ್ಲಿ ಇವರೆವಿಗೂ 6 ಸಾವಿರ ನಾನಾ ಬಗೆಯ ಭ್ರಷ್ಟಾಚಾರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ತಿಳಿಸಿದ್ದಾರೆ. ಮಂಗಳವಾರ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಅಧಿಕಾರಕ್ಕೆ ಬರುವ ಮುನ್ನ 6, 800 ಪ್ರಕರಣಗಳು ಇದ್ದು, ಈಗಾಗಲೆ 6 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮಿಕ್ಕ 600 ಪ್ರಕರಣಗಳಿಗೆ ಸದ್ಯದಲ್ಲಿ ಪೂರ್ಣಗೊಳಿಸಲಾಗುವುದು. ಹಲವು ಪ್ರಕರಣಗಳನ್ನು ನಾವು ಬೆಳಕಿಗೆ ತರಬಹುದು ಅದರೆ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ನೀಡುವುದು ಸರ್ಕಾರದ ಕೆಲಸ. ಯಾವುದೆ ವ್ಯಕ್ತಿ ದೂರು ನೀಡಿದರೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿ ದಾಳಿ ನಡೆಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ವೇದಮೂರ್ತಿ, ಡಿವೈಎಸ್ಪಿ ಸುಜೀತ್, ತಹಸೀಲ್ದಾರ್ ಜಗದೀಶ್, ಪೊಲೀಸ್ ಇನ್ಸೆಪೆಕ್ಟರ್ ಗಣೇಶ್ ಇತರರು ಇದ್ದರು.