ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊಳಲು ವಾದಕ ಹಾಲಪ್ಪಗೆ ಶ್ರದ್ಧಾಂಜಲಿ

Mainashree
Updated On : 24 Jun 2014, 10:17 am

ಹಾಸನ: ಇತ್ತೀಚೆಗೆ ಮೃತಪಟ್ಟ ಕೊಳಲುವಾದಕ, ನಾಟಕಕಕಾರ ಹಾಗೂ ಸಂಗೀತ ವಿದ್ವಾಂಸ ಹೆಚ್.ವಿ. ಹಾಲಪ್ಪಗೆ ನಾನಾ ಕ್ಷೇತ್ರದ ಕಲಾವಿದರು ಶ್ರದ್ಧಾಂಜಲಿ ಅರ್ಪಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ  ದಿ.ಹೆಚ್.ವಿ. ಹಾಲಪ್ಪ ಅವರ ಶ್ರದ್ಧಾಂಜಲಿ ಕಾರ್ಯಾಕ್ರಮದಲ್ಲಿ ಮೊದಲು ಅವರ ಭಾವಚಿತ್ರಕ್ಕೆ ದೀಪ ಬೆಳಗಿ ನಂತರ ಪುಷ್ಪವನ್ನು ಅರ್ಪಿಸಿದರು. ಎರಡು ನಿಮಿಷ ಮೌನ ಆಚರಿಸಲಾಯಿತು.
ಸಂಗೀತ ವಿದ್ವಾಂಸ: ಸಾಹಿತಿ ಜ.ಹೊ. ನಾರಾಯಣಸ್ವಾಮಿ ಮಾತನಾಡಿ, ಹೃದಯ ಬಿಚ್ಚಿ ಮಾತನಾಡುತ್ತಿದ್ದ ಅಪರೂಪದ ವ್ಯಕ್ತಿ ಹಾಲಪ್ಪ ನಾಟಕಗಾರರು, ಸಂಗೀತ ವಿದ್ವಾಂಸರಾಗಿದ್ದರು. ಯಾವುದೇ ವಂಚನೆ ಇಲ್ಲದೆ ನಗು ನಗುತಾ ಎಲ್ಲಾವನ್ನು ಸ್ವೀಕರಿಸುತ್ತಿದ್ದರು ಎಂದು ಅವರ ಜೀವನದ ಕೆಲ ನೆನಪುಗಳನ್ನು ನೆನಪಿಸಿಕೊಂಡರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ  ಎಚ್.ಬಿ. ಮದನ್ ಗೌಡ ಮಾತನಾಡಿ, ಹಾಲಪ್ಪ ಅನೇಕ ನಾಟಕಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಯಾವ ಪಾತ್ರ ಕೊಟ್ಟರೂ ನಿಷ್ಠೆಯಿಂದ ಪಾಲ್ಗೊಳ್ಳುತ್ತಿದ್ದರು ಎಂದು ಸ್ಮರಿಸಿದರು. ಅಮೋಘ್ ವಾಹಿನಿ ವ್ಯವಸ್ಥಾಪಕ  ಕೆ.ಪಿ.ಸತ್ಯಪ್ರಮೋದ್, ಕನ್ನಡ ಮತ್ತು ಸಂಸ್ಕೃ ಇಲಾಖೆಯ ಕುಮಾರ್ ಹಾಗೂ ನಾಟಕಗಾರರು, ಹಾರ್ಮೋಮೋನಿಯಂ ವಾದಕರು, ಕೊಳಲು ವಾದಕರು, ಹಾಡುಗಾರರು ಸೇರಿದಂತೆ ನಾನಾ ಕಲಾಕ್ಷೇತ್ರದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement