ಚರಂಡಿಯಲ್ಲಿ ಶವ ಪತ್ತೆ: ಕೊಲೆ ಶಂಕೆ
ಹಾಸನ: ನಗರದ ಚನ್ನಪಟ್ಟಣದ ಹೊಸ ಬಸ್ಸು ನಿಲ್ದಾಣದ ಬಳಿ ಇರುವ ದೊಡ್ಡ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಮಂಗಳವಾರ ಪತ್ತೆಯಾಗಿದೆ.
ಚರಂಡಿ ಬಳಿ ರಕ್ತದ ಗುರುತು, ಆತನ ಚಪ್ಪಲಿ ಹಾಗೂ ಹೊಡೆದಾಡಿರುವ ಕೆಲ ಗುರುತುಗಳು ಕಂಡು ಬಂದಿವೆ. ಸುಮಾರು 42 ವರ್ಷದ ಒಳಗಿರುವ ವ್ಯಕ್ತಿ ಇರಬಹುದು. ಕುಡಿದು ಇತನ ಮೇಲೆ ಗುಂಪೂಂದು ಹಲ್ಲೆ ಇಲ್ಲವೇ, ಯಾವುದೂ ದ್ವೇಷಕ್ಕೆ ಕೊಲೆ ಮಾಡಿ ಎಸೆದಿರಬಹುದು ಅಥವಾ ಕುಡಿದ ಅಮಲಿನಲ್ಲಿ ಈತನ ಸ್ನೇಹಿತರೇ ಸಾಯಿಸಿರಬಹುದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.