ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಿಥಿಲ ಓವರ್‌ಹೆಡ್ ಟ್ಯಾಂಕ್ ತೆರವು

Mainashree
Updated On : 24 Jun 2014, 9:07 am

ಅರಸೀಕೆರೆ:  ಪಟ್ಟಣದ ಐದನೇ ವಾರ್ಡ್‌ನ ವಸತಿ ಪ್ರದೇಶದಲ್ಲಿದ್ದ ಶಿಥಿಲಾವಸ್ಥೆಯಲಿದ್ದು,  ಸುತ್ತಮುತ್ತಲ ಜನರಿಗೆ ಆತಂಕ ಮೂಡಿಸಿದ್ದ ಓವರ್‌ಹೆಡ್ ಟ್ಯಾಂಕನ್ನು ಪುರಸಭೆ ಇತ್ತೀಚೆಗೆ ತೆರವುಗೊಳಿಸಿತು.
 ಹಾಸನ ರಸ್ತೆಯ ಎಡ ಹಾಗೂ ಬಲ ಭಾಗದ ಬಡಾವಣೆ ಸೇರಿದಂತೆ ಪಟ್ಟಣದ ಕೆಲ ಬಡಾವಣೆಗಳಿಗೆ ನೀರು ಪೂರೈಸಲೆಂದು ಕಳೆದ ನಾಲ್ಕು ದಶಕಗಳ ಹಿಂದೆ ಸುಮಾರು ನಾಲ್ವತ್ತೈದು ಅಡಿಗೂ ಎತ್ತರದ ಓವರ್‌ಹೆಡ್ ಟ್ಯಾಂಕನ್ನು  ನಿರ್ಮಿಸಲಾಗಿತ್ತು. ಕಾಲಕ್ರಮೇಣ ಈ ಟ್ಯಾಂಕ್ ಸೋರಲು ಆರಂಭಿಸಿದ್ದರಿಂದ ಕಳೆದ ಒಂದುವರೆ ದಶಕದಿಂದ ಪುರಸಭೆ ಇದನ್ನು ಬಳಸುತ್ತಿರಲಿಲ್ಲ.
ಆತಂಕ ಮೂಡಿಸಿದ್ದ ಟ್ಯಾಂಕ್: ಅಸ್ಥಿಪಂಜರದಂತೆ ನಿಂತಿದ್ದ ಈ ಓವರ್‌ಹೆಡ್ ಟ್ಯಾಂಕ್ ಇದ್ದ ಪ್ರದೇಶದ ವಸತಿ ಗೃಹಗಳ ಮಾಲೀಕರು ಯಾವಾಗ ಟ್ಯಾಂಕ್ ಕುಸಿದು ಬೀಳುತ್ತದೆಯೋ ಎಂಬ ಆತಂಕದೊಂದಿಗೆ ದಿನದೂಡುತ್ತಿದ್ದರು. ಅಲ್ಲದೇ ಈ ಟ್ಯಾಂಕನ್ನು ತೆರವುಗೊಳಿಸುವಂತೆ ಹತ್ತು-ಹಲವು ಬಾರಿ ಪುರಸಭೆಗೆ ಮನವಿ  ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟ್ಯಾಂಕ್ ತೆರವುಗೊಳಿಸಲಾಯಿತು.
 ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯಾಧಿಕಾರಿ ಸತ್ಯನಾರಾಯಣ್, ಪುರಸಭೆ ಅಭ್ಯಂತರ ಜಗದೀಶ್, ಪರಿಸರ ಅಭ್ಯಂತರ ನವೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement