ಲೋಕಾಕ್ಕೆ ಇನ್ನೂ ಹೆಚ್ಚು ಅಧಿಕಾರ ಬೇಕು
ಕನ್ನಡಪ್ರಭ ವಾರ್ತೆ, ಹಾಸನ, ಜೂ. 25
ಲೋಕಾಯುಕ್ತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಇನ್ನೂ ಹೆಚ್ಚು ಅಧಿಕಾರ ನೀಡಿದರೇ ಒಳ್ಳೇಯದು. ಆದರೆ ಅದಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಲೋಕಾಯುಕ್ತ ಡಾ. ಭಾಸ್ಕರ್ ರಾವ್ ಹೇಳಿದರು.
ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಲೋಕಾಯುಕ್ತವೇ ನೇರವಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಮತ್ತು ಮೊಕದ್ದಮೆ ದಾಖಲಿಸುವ ಅಧಿಕಾರ ನೀಡಿದರೇ ವಿಚಾರಣೆ ಹಂತದಲ್ಲಿ ವಿಳಂಬವಾಗುವುದಿಲ್ಲ. ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳುತ್ತವೆ. ಈಗ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸ್ಥಾನ ತೊರೆಯುವೆ: ಇಲಾಖೆ ಮುಖ್ಯಸ್ಥರ ಅನುಮತಿ ಪಡೆಯುವುದೇ ಚಾರ್ಜ್‌ಶೀಟ್ ವಿಳಂಬಕ್ಕೆ ಕಾರಣವಾಗುತ್ತಿದೆ. ಲೋಕಾಯುಕ್ತ ವಿಚಾರಣೆಗೆ ಒಳಪಟ್ಟ ಅಧಿಕಾರಿಗಳಿಗೆ ಬಡ್ತಿ ನೀಡಿ, ಉತ್ತಮ ಸ್ಥಳಕ್ಕೆ ವರ್ಗಾವಣೆ ಮಾಡುವ ಬಗ್ಗೆ ಜನಪ್ರತಿನಿಧಿಗಳನ್ನೇ ಕೇಳಬೇಕು. ಲಭ್ಯ ಇರುವ ಅಧಿಕಾರ ಮತ್ತು ಕಾನೂನು ವ್ಯಾಪ್ತಿಯಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವುದು ನನ್ನ ಕರ್ತವ್ಯ. ಇದು ಸಾಧ್ಯವಾಗದಿದ್ದರೇ ಲೋಕಾಯುಕ್ತರ ಸ್ಥಾನದಿಂದ ನಿರ್ಗಮಿಸುತ್ತೇನೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ ಮತ್ತಿತರ ಅನಾಚಾರಗಳನ್ನು ತೊಲಗಿಸಲು ಹತ್ತಲ್ಲ, ನೂರಾರು ಕಾನೂನುಗಳಿವೆ. ಆದರೂ ಭ್ರಷ್ಟಾಚಾರ ಇದೆ ಎಂಬ ಕೂಗು ಇದೆ. ಇದನ್ನು ತಪ್ಪಿಸಲು ಸಕಾಲ ಮಾದರಿಯಲ್ಲಿ ನಿಗದಿತ ವೇಳೆಗೆ ಸರ್ಕಾರದ ಯೋಜನೆಗಳು ಮತ್ತು ಅದರ ಲಾಭ ಸಾಮಾನ್ಯರಿಗೆ ತಲುಪುವಂತೆ ಮಾಡಬೇಕು. ಈ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕಾಗಿದೆ. ಅಲ್ಲದೇ ಸಾರ್ವಜನಿಕ ಚರ್ಚೆಯೂ ಆಗಬೇಕಾಗಿದೆ ಎಂದು ಸಲಹೆ ನೀಡಿದರು.
58 ಕ್ಕೆ ನಾಲ್ವರು ಹಾಜರು: ಕೋಲಾರ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿದ್ದಾಗ ಆಶ್ಯರ್ಯಕರ ಘಟನೆ ಕಂಡೆ. ಅಲ್ಲಿ 58 ಸಿಬ್ಬಂದಿ ಇದ್ದಾರೆ. ಆದರೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದು ನಾಲ್ಕೇ ಮಂದಿ. ನಂತರ ಕಾಲೇಜಿನ ಅಧೀಕ್ಷಕರನ್ನು ಕರೆಸಿ, ತರಾಟೆ ತೆಗೆದುಕೊಂಡು, ಬಯೋವುಟ್ರಿಕ್ ಪದ್ಧತಿಯನ್ನು ಜಾರಿಗೊಳಿಸುವಂತೆ ಮಾಡಿದೆ. ರಾಜ್ಯದ 6 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕನ್ನಡ ಓದಲು- ಬರೆಯಲು ಬಾರದಿರುವುದನ್ನು ಕಂಡು ವಿಷಾದಿಸಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಕೂಡಲೇ ಗಮ
120 ಕೋಟಿ ಆಸ್ತಿ ವಶ
ಲೋಕಾಯುಕ್ತ ವಿಚಾರಣೆ ನಡೆಸಿದ ಕೇಸುಗಳಲ್ಲಿ ಶೇ. 34.1 ರಷ್ಟು ಕೇಸುಗಳಲ್ಲಿ ಆಪರಾಧಿಗಳಿಗೆ ಶಿಕ್ಷೆಯಾಗಿದೆ. ಬಹಳಷ್ಟು ಪ್ರಕರಣಗಳು ಖುಲಾಸೆಯಾಗಲು ಕಾರಣ ದೂರು ಕೊಟ್ಟವರು ವಿಚಾರಣೆ ಹಂತದಲ್ಲಿ ಹಿಂದೆ ಸರಿಯುವುದು. ಇದು ಒಂದು ರೀತಿ ತಾಯಿಯೇ ಮಗುವಿಗೆ ವಿಷವುಣಿಸಿದಂತೆ. ಇಲ್ಲಿಯವರೆಗೆ ದಾಳಿ ನಡೆಸಿ ರಾಜ್ಯಾದ್ಯಂತ ರು. 120 ಕೋಟಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.