ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉನ್ನತ ಹುದ್ದೆಗೆ ಗ್ರಾಮೀಣ ಪ್ರದೇಶದವರು ಮುನ್ನುಗ್ಗಬೇಕು

Mainashree
Updated On : 26 Jun 2014, 10:07 am

ಬೇಲೂರು: ರಾಷ್ಟ್ರೀಯ  ಮಟ್ಟದ ಉನ್ನತ ಹುದ್ದೆಗಳಿಗೆ ಗ್ರಾಮೀಣ ಪ್ರದೇಶದ  ವಿದ್ಯಾರ್ಥಿಗಳು ಮುನ್ನುಗ್ಗಿ ಅವಕಾಶಗಳನ್ನು  ಬಾಚಿಕೊಳ್ಳಬೇಕು, ಕಾರಣ ಸಾಧನೆ ಸಾಧಕನ  ಸ್ವತ್ತು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಪರ್ವತಯ್ಯ ಕರೆ ನೀಡಿದರು. ತಾಪಂ ಸಭಾಂಗಣದಲ್ಲಿ ನಡೆದ ಬೇಲೂರಿನ ಐಎಎಸ್ ಅಧಿಕಾರಿ ಕೆ.ಎಂ.ಶ್ರೇಯಸ್ ಇವರಿಗೆ ಅತ್ಮೀಯ ಸನ್ಮಾನ ಮಾಡುವ ಮೂಲಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರ್ಕಾರ ಸರ್ವ ಸೌಲಭ್ಯ ನೀಡಿದೆ ಎಂದು ವೇದಿಕೆಯಲ್ಲಿ ಹೇಳಿಕೆ ನೀಡುತ್ತಾರೆ. ಅದರೆ ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಹುದ್ದೆಗೆ ಬರಬೇಕು ಎಂಬ ಅತ್ಮವಿಶ್ವಾಸ ಮೂಡಿಸುವ ಮಾರ್ಗದರ್ಶಿಗಳು ಇಲ್ಲ, ಅದರೆ ಸಾಧನೆ ಮಾಡುವ ಗ್ರಾಮೀಣ ವಿದ್ಯಾರ್ಥಿಗಳು ಬದುಕಿನಲ್ಲಿ ಛಲ ಮೈಗೂಡಿಕೊಂಡು ರಾಜ್ಯ ಹಾಗೂ ರಾಷ್ಟ್ರೀಯ ಉದ್ಯೋಗಗಳಿಗೆ ಲಗ್ಗೆ ಹಾಕಬೇಕು ಎಂದರು. ಬೇಲೂರು ತಾಲೂಕಿನ ಕುಗ್ರಾಮ ಕುಶವಾರ ಮೂಲದಲ್ಲಿ ಜನಿಸಿ ಇಂದು ಐಎಎಸ್ ಪಾಸು ಮಾಡಿ ತಾಲೂಕಿಗೆ ಘನತೆ ತಂದಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement