ಮಂಗಳಮುಖಿಯರ ಮೇಲೆ ಲೈಂಗಿಕ ದೌರ್ಜನ್ಯ: ರೇವತಿ ಅಸಮಾಧಾನ
ಹಾಸನ: ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದರಿಂದ ತೊಂದರೆ ಉಂಟಾಗುತ್ತಿದೆ. ಎಂದು ಮಂಗಳಮುಖಿ ಹಕ್ಕು ಹೋರಾಟಗಾರ್ತಿ ಎ.ರೇವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡು ಹಿಜಿಡಾಗಳ ಯಾತಮಯ ಬದುಕನ್ನು ಅನುಭವಿಸಲಾಗುತ್ತಿದೆ. ತನ್ನ ಸಮುದಾಯದ ಎಲ್ಲಾ ನೋವುಗಳಿಗೆ ಪ್ರತಿಸ್ಪಂದಿಸಲು ಹಿಜಿಡಾ ಸಾಮಾಜಿಕ ಕಾರ್ಯಕರ್ತೆಯಾಗಿ ಆ ಸಮುದಾಯದ ಬಿಡುಗಡೆಗಾಗಿ ಇಂದಿಗೂ ಹೋರಾಟದಲ್ಲಿ ತೊಡಗಿಸಿಕೊಳ್ಳಲಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಪೊಲೀಸರೋಪಾದಿಯಲ್ಲಿ ನಮ್ಮನ್ನು ಲೈಂಗಿಕತೆಗೆ ಬಳಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಹಾನಸದಲ್ಲಿ 700ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದಾರೆ. ಆದ್ದರಿಂದ ಸಮಾಜದಲ್ಲಿ ನಮ್ಮನ್ನು ನೋಡುವಂತಹ ಭಾವನೆ ಕಡಿಮೆಯಾಗಬೇಕು. ಸರ್ಕಾರದ ಸವಲತ್ತುಗಳು ನಮಗೂ ದೊರೆಯಬೇಕು ಎಂದು ಒತ್ತಾಯಿಸಿದರು.
ವಿಚಾರ ಸಂಕಿರಣ: ಹಿರಿಯ ದಲಿತ ಮುಖಂಡ ಸಮತಾ ಸೈನಿಕ ದಳ ಮತ್ತು ಆರ್‌ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ರ 60ನೇ ಹುಟ್ಟು ಹಬ್ಬದ ಅಂಗವಾಗಿ ಐಕ್ಯತೆಗಾಗಿ ದಲಿತರು ಎಂಬ ಕುರಿತು ವಿಚಾರ ಸಂಕಿರಣ ಮತ್ತು ನಾಟಕೋತ್ಸವ ಜೂ.27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ ಎಂದು ರೇವತಿ ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ, ಶ್ರೀಗಂಧ ಸೇವಾ ಸಂಸ್ಥೆ, ನಾಗಭೂಮಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಲಿತ ಸಂಘರ್ಷ ಸಮತಿ (ಅಂಬೇಡ್ಕರ್ ವಾದ), ಜೆಸಿಐ ಹಾಸನ ಸಂಜೀವಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಪ್ರಕೃತಿ ಸಮುದಾಯ ಸೇವಾ ಸಂಸ್ಥೆ, ಪ್ರಕೃತಿ ಪೆಹಚಾನ್ ಅಂಬೇಡ್ಕರ್ ಯುವಕ ಸಂಘ ಆಡುವಳ್ಳಿ-ನಿಟ್ಟೂರು, ಎಸ್ಸಿ ಎಸ್ಟಿ ನೌಕರರ ಸಂಘ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.