ಮಾಲೇಕಲ್ ತಿರುಪತಿಯಲ್ಲಿ ಗರುಡಗಂಬ ಪ್ರತಿಷ್ಠಾಪನೆ
ಅರಸೀಕೆರೆ: ಪಟ್ಟಣದ ಸಮೀಪವಿರುವ ಇತಿಹಾಸ ಪ್ರಸಿದ್ಧ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಗರುಡಗಂಬ ಪುನಃ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಾಕ್ರಮಗಳು ವೈಖಾನಸ ಆಗಮ ರೀತಿಯಲ್ಲಿ ಬುಧವಾರ ವೈಭವ ಸಡಗರದಿಂದ ನಡೆಯಿತು.
ಮಂಗಳವಾರ ಮಧ್ಯರಾತ್ರಿಯಿಂದಲೇ ದೇವತಾ ಪ್ರಾರ್ಥನೆ ಶುದ್ದ ಪುಣ್ಯಾಹ, ಮೃತಿಕಾಸಂಗ್ರಹ, ಅಂಕುರಾರ್ಪಣೆ, ಕಲಶಾರಾಧನೆ. ಪಂಚಗವ್ಯ ಪ್ರೋಕ್ಷಣೆ ಅಧಿವಾಸಗಳು ಉಕ್ತಹೋಮಗಳು. ವಹಾ ಪೂರ್ಣಾಹುತಿ, ನಡೆಯಿತು. ಇಂದು ಬೆಳಗ್ಗೆ, ದೇವಾಲಯ ಮಂಭಾಗದ ಗರುಡಗಂಬ ಎದುರು ಮೌಳಿಮಾಲಾದಿ ಹೋಮ. ಸುದರ್ಶನಹೋಮ. ಧ್ವಜಗಾಯತ್ರಿ ಹೋಮಗಳು ನಡೆದ ನಂತರ ಗರುಡಗಂಬ ಪ್ರಾಣಪ್ರತಿಷ್ಠೆ ಕಲಶಾಭಿಷೇಕ ನಡೆದ ನಂತರ ಮಾಹಾಪೂರ್ಣಾಹುತಿ ಅರ್ಪಿಸಿದರು.
ಗರುಡಗಂಬಕ್ಕೆ ಹೂವಿನಿಂದ ಶೃಂಗರಿಸಲಾಗಿತ್ತು. ಗೋವಿಂದರಾಜ ಸ್ವಾಮಿ, ಮಹಾಲಕ್ಷ್ಮಿ ಅಮ್ಮನವರಿಗೆ ವಿಷೇಶ ಅಭಿಷೇಕ, ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತು. ಲಕ್ಷ್ಮಿವೇಂಕಟರಮಣ ಸ್ವಾಮಿಯನ್ನು ಗರುಡವಾಹನದಲ್ಲಿ ಕುಳ್ಳಿರಿಸಿ ಗೋವಿಂದ ಗೋವಿಂದ ನಾಮಸ್ಮರಣೆ ಉತ್ಸವ ನೇರವೇರಿಸಲಾಯಿತ್ತು. ಧಾರ್ಮಿಕ ಕಾರ್ಯಾಕ್ರಮಗಳನ್ನು. ಆಗಮೀಕ ರಾಮಪ್ರಸಾದ್, ವರದರಾಜ್, ನರಸಿಂಹಮೂರ್ತಿ, ಇವರ ಆಚಾರ್ಯಾತ್ವದಲ್ಲಿ ನಡೆಯಿತು. ಕಂದಾಯ ಇಲಾಖೆ ಅಧಿಕಾರಿಗಳಾದ ಪುಟ್ಟಯ್ಯ, ಅಕ್ಕಮ್ಮ. ಪಾರುಪತ್ತೆದಾರ್ ಲೋಕೇಶಯ್ಯ, ಹಾಗೂ ದೇವಾಲಯ ರಥೋತ್ಸವದ ಸಮಿತಿ ಸದಸ್ಯರುಗಳಾದ ಟಿ,ಆರ್, ನಾಗರಾಜ್, ಎನ್,ಸಿ, ಗೋವಿಂದರಾಜ್, ಪರಮಶಿವಯ್ಯ, ಚಂದ್ರು, ಸತ್ಯನಾರಾಯಣ. ನಾಗರತ್ನ, ಕೆ.ಶ್ರೀನಿ ವಾಸ್.ಬಾಬು, ಎಚ್,ಜಿ, ವೆಂಕಟೇಶ್ ಬಾಬು. ದೇವರಾಜ್, ನಾಗರತ್ನಮ್ಮ, ವಿಶ್ವನಾಥ್, ಅಗ್ಗುಂದ ಗ್ರಾಮ ಪಂಚಾಯ್ತಿ ಸದಸ್ಯರಾದ ರೇಣುಕಪ್ಪ, ತಿರುಪತಿ ಗ್ರಾಮಸ್ಥರು, ಬೊಮ್ಮೇನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.