ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ವಿಜ್ಞಾನ ನೆಮ್ಮದಿ ನೀಡುವುದಿಲ್ಲ'

Vishwanath S
Updated On : 28 Jun 2014, 12:10 pm

ಚನ್ನರಾಯಪಟ್ಟಣ: ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ತಮ್ಮ ಪೀಠಾರೋಹಣದ ನಂತರ ಪ್ರಥಮ ಬಾರಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಭವ್ಯ ಸ್ವಾಗತ ನೀಡಿ ಸ್ವಾಗತಿಸಲಾಯಿತು.
ಶ್ರವಣಬೆಳಗೊಳಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರವೇಶಿಸುತ್ತಿದ್ದಂತೆ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಶ್ರೀಗಳಿಗೆ ಹಾರ ಹಾಗೂ ಶಾಲು ಹೊದಿಸಿ ಸ್ವಾಗತಿಸಿದರು. ವಿವಿಧ ಸಮುದಾಯದ ಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು ಇದ್ದರು.
ಶ್ರೀ ಮಠದ ವತಿಯಿಂದ ತೆರೆದ ವಾಹನದ ಮೂಲಕ ಪೂರ್ಣಕುಂಭ ಕಳಸ, ವಿವಿದ ವಾದ್ಯಗಳೊಂದಿಗೆ ಶ್ರೀ ಮಠಕ್ಕೆ ಕರೆತಂದರೆ, ಶ್ರವಣಬೆಳಗೊಳದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅವರನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಶ್ರೀಮಠದವರಗೆ ಸಾಲಾಗಿ ನಿಂತು ಸ್ವಾಗತಿಸಿದರು
ಚಾವುಂಡರಾಯ ವೇದಿಕೆಯಲ್ಲಿ ಶ್ರೀಗಳನ್ನು ಚಾರುಕೀರ್ತಿ ಅವರು ಸದಾ ದೀಪದಂತೆ ಎಲ್ಲರಿಗೂ ಬೆಳಕಾಗಿರಲೆಂದು ಆಶಿಸಿ ಅವರಿಗೆ ನಾಲ್ಕು ಅಡಿ ಎತ್ತರದ ಎರಡು ದೀಪದ ಕಂಬಗಳನ್ನು ನೀಡಿ ಸನ್ಮಾನಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಇಂದು ವಿಜ್ಞಾನ ಸಕಲವನ್ನು ನೀಡುತ್ತಿದ್ದರೂ ಶಾಂತಿ ಮತ್ತು ನೆಮ್ಮದಿಯನ್ನು ವಿಜ್ಞಾನ ನೀಡಲು ಸಾಧ್ಯವಿಲ್ಲ. ಅದನ್ನು ಪಡೆಯಲು ಮಠ ಮಂದಿರಗಳು ಅಗತ್ಯವಿದೆ ಎಂದರು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ಜಿಪಂ ಸದಸ್ಯರಾದ ನಂಜುಂಡೇಗೌಡ, ಕುಸುಮಾ ಬಾಲಕೃಷ್ಣ, ಗ್ರಾಪಂ ಉಪಾಧ್ಯಕ್ಷೆ ತಾರಾ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement