ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಳ್ಳಿಗರಲ್ಲೇ ಪರಿಸರ ಪ್ರಜ್ಞೆ ಹೆಚ್ಚು: ಡಾ. ವಿಜಯ್

Mainashree
Updated On : 28 Jun 2014, 10:35 am

ಹಾಸನ: ಹಳ್ಳಿ ಜನರಲ್ಲಿ ಪರಿಸರ ಪ್ರಜ್ಞೆ ಇರುವಷ್ಟು ಪೇಟೆ ಜನರಲ್ಲಿ ಇಲ್ಲ. ಪೇಟೆ ಜನರಿಗೂ ಪರಿಸರಕ್ಕೆ ಕಾಣಿಕೆ ನೀಡುವ ಅವಕಾಶವಿದೆ ಎಂದು  ಪರಿಸರವಾದಿ   ವಿಜಯ್ ಅಂಗಡಿ ಅಭಿಪ್ರಾಯಪಟ್ಟರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಶಾಂತಿ ನಗರ ಘಟಕದ ಲೀಲಾ ಧರ್ಮಪ್ಪನವರ ಮನೆಯಲ್ಲಿ ಇತ್ತೀಚೆಗೆ ಏರ್ಪಸಿದ್ದ ಮಾಸಿಕ 18ನೇ  ಅನಿಸಿಕೆ- ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಬಳಸುವ ವಿದ್ಯುತ್, ನೀರು ರಸಾಯನಿಕ ಪದಾರ್ಥಗಳನ್ನು ಮಿತವಾಗಿಸ ಬೇಕು. ಮನೆ ಕೈತೋಟದಲ್ಲಿ ಹೂ, ಅಲಂಕಾರಿಕ ಸಸ್ಯಗಳಲ್ಲದೆ ಕೃಷಿ ಕೂಡ ಮಾಡಬಹುದಾಗಿದೆ ಎಂದು ತಿಳಿಸಿದರು.
ಪರಿಸರ ಮಿತ್ರ: ಮಳೆ ನೀರು ಸರ್ವಶ್ರೇಷ್ಠ, ಅದನ್ನು ಶೇಖರಿಸುವ ವ್ಯವಸ್ಥೆ ಮಾಡಿಕೊಂಡರೆ ಅದೇ ದಿನನಿತ್ಯದ ಎಲ್ಲಾ ಕೆಲಸಗಳಿಗೂ ಉಪಯೋಗವಾಗುತ್ತದೆ. ಸೈಕಲ್ ಹೆಚ್ಚು ಬಳಸಬಹುದು ಇದರಿಂದ ಆರೋಗ್ಯ ಸ್ಥಿತಿ ಚೆನ್ನಾಗಿ ಇರುತ್ತದೆ. ಅಲ್ಲದೆ ಆರ್ಥಿಕ ಹೊರೆ ಇರುವುದಿಲ್ಲ. ಇದು ಪರಿಸರ ಮಿತ್ರ ಕೂಡ ಎಂದು ಹೇಳಿದರು.
ಅನಿಸಿಕೆ-ಅಭಿವ್ಯಕ್ತಿ ಸಂಚಾಲಕಿ ಪದ್ಮ ಮಂಜುನಾಥ್ ಸ್ವಾಗತಿಸಿದರು. ಬಿಂದು, ಪೂಜಾ, ಮಮತ ಪ್ರಾರ್ಥಿಸಿದರು. ಕೋಟ್ರೇಶ್ ಉಪ್ಪಾರ್, ವೇದಶೀ ಮತ್ತಿ ತರರು ಪರಿಸರದ ಕವನವಾಚನ ಮಾಡಿದರು. ಕುಮಾರಿ ಮೋನಿಕಾ ನೃತ್ಯ ಪ್ರದರ್ಶಿಸಿದರು, ಕಾರ್ಯದರ್ಶಿ ವೇದಶ್ರೀ ವಂದಿಸಿದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement