ಹೈನುಗಾರಿಕೆ ಲಾಭದಾಯಕ ಉದ್ಯಮ: ಜಿಪಂ ಸದಸ್ಯ ಪುರುಷೋತ್ತಮ್
ಆಲೂರು: ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಅದರ ಪೋಷಣೆ ಸಂಪೂರ್ಣ ಜವಾಬ್ದಾರಿ ಪ್ರತಿಯೊಬ್ಬ ರೈತನಿಗೂ ಇದೆ ಎಂದು ಜಿಪಂ ಸದಸ್ಯ ಪುರುಷೋತ್ತಮ್ ತಿಳಿಸಿದರು.
ತಾಲೂಕಿನ ಬೋಸ್ಮಾನಹಳ್ಳಿಯಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪಶು ಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಾನುವಾರು ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಯಿಲೆ ಬಂದ ಮೇಲೆ ನೋಡುವುದಕ್ಕಿಂತ ಮುಂಚಿತವಾಗಿ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲದಿದ್ದರೆ, ಜಾನುವಾರುಗಳು ಸಾಯುತ್ತವೆ ಎಂದು ಹೇಳಿದರು.
ಉತ್ತಮ ಬೆಳೆ: ಯೋಜನೆ ಯೋಜನಾಧಿಕಾರಿ ಸುಮಿತ್ರ ಜೈನ್ ಮಾತನಾಡಿ, ದನ- ಕರುಗಳನ್ನು ರಕ್ಷಿಸಬೇಕು. ಅವುಗಳ ಪೋಷಣೆ ನಮ್ಮೆಲ್ಲರ ಹೊಣೆ. ಅಲ್ಲದೆ ಪ್ರತಿನಿತ್ಯ ಲಾಭ ತರುವುದು. ಹೈನುಗಾರಿಗೆ ಉದ್ಯಮ ಹೈನುಗಾರಿಕೆ ಜೊತೆಯಲ್ಲಿ ಕೃಷಿಯನ್ನು ಮಾಡಿದರೆ ಹೈನುಗಾರಿಕೆಯಿಂದ ಬರುವ ತ್ಯಾಜ್ಯ ವಸ್ತುಗಳನ್ನು ಕೃಷಿಗೆ ಬಳಸುವುದರಿಂದ ಉತ್ತಮವಾದ ಬೆಳೆ ತೆಗೆಯಬಹುದು ಎಂದರು.
ಪಶುವೈದ್ಯ ಶಿವಲಿಂಗ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ.ಎಸ್. ಆನಂದ ಮತ್ತು ಮಾಜಿ ಸದಸ್ಯರಾದ ರಾಮಯ್ಯ ಹಾಗೂ ಯೋಜನೆಯ ಕೃಷಿ ಅಧಿಕಾರಿ ಶಶಿಕುಮಾರ್ ಮತ್ತು ಜಗದೀಶ, ಮೇಲ್ವಿಚಾರಕ ರಾಜೇಶ್, ಎಸ್.ಪಿ. ಶಿವಕುಮಾರ ಹಾಗೂ ಗ್ರಾಮಸ್ಥರು ಇದ್ದರು.