ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಸರಿಗಷ್ಟೆ ಘೋಷಣೆಯಾಗದಿರಲಿ

Mainashree
Updated On : 29 Jun 2014, 9:22 am

ಕನ್ನಡಪ್ರಭ ವಾರ್ತೆ, ಕಿಕ್ಕೇರಿ,ಜೂ.29
ಸಮ್ಮೇಳನಗಳು ಅರ್ಥಪೂರ್ಣವಾಗಲು ನುಡಿದಂತೆ ನಡೆಯುವ ವೇದಿಕೆಯಾಗಿ ನೆಲ, ಜಲ, ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾದಾಗ ಮಾತ್ರ ಸಾಧ್ಯವೆಂದು ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಸಿಎಒ ಡಾ.ಎಚ್.ಎಲ್.ನಾಗರಾಜು ಎಚ್ಚರಿಸಿದರು.
 ಪಟ್ಟಣದಲ್ಲಿ ನಡೆದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಬಹುತೇಕ ಸಮ್ಮೇಳನದ ನಿರ್ಣಯಗಳು ಕೇವಲ ಬಾಯಿ ಚಪಲತೆ ಹಾಡುವ ಘೋಷಣೆಯಾಗುತ್ತಿವೆ. ಕನ್ನಡದ ಜಾಗೃತಿ ಮೂಡಲು ಅರ್ಥಪೂರ್ಣವಾಗಿ ಸಾಹಿತ್ಯ ಸಮ್ಮೇಳನಗಳು ಹೋಬಳಿಯ ಗಡಿ ಭಾಗಗಳಲ್ಲಿ ನಡೆಯಬೇಕಿದೆ.
 ಜೊತೆಗೆ ಉದ್ಧೇಶದ ಸಾಫಲ್ಯತೆ ಕಾಣಲು ವಾಹನ ಸೌಕರ್ಯದ ಜೊತೆಗೆ ಮೂಲ ವ್ಯವಸ್ಥೆಯು ಕಲ್ಪಿಸಬೇಕಿದೆ. ತಾಲೂಕಿನಲ್ಲಿ ಕನ್ನಡ ಭವನದ ಕನಸು ನನಸಾಗಲು ಧ್ವನಿ ಬೇಕಿದೆ. ಕಿಕ್ಕೇರಿಯಲ್ಲಿ ಜರೂರಾಗಿ ಕೆ.ಎಸ್.ನರಸಿಂಹಸ್ವಾಮಿ ಸ್ಮಾರಕ, ಪ್ರತಿಷ್ಠಾನವಾಗಲು ಪಕ್ಷಭೇದ, ಸ್ವಪ್ರತಿಷ್ಟೆ ಮರೆತಲ್ಲಿ ಮಾತ್ರ ಸಾಧ್ಯ. ಈ ಸಮ್ಮೇಳನದ ಏಕೈಕ ಗುರಿ ಕೆ.ಎಸ್.ನ. ಸ್ಮಾರಕ ಎಂಬುದನ್ನು ಸಂಘಟಕರು ಅರಿಯಬೇಕೆಂದು ಒತ್ತಾಯಪೂರ್ವಕವಾಗಿ ಹೇಳಿದರು.
 ಬೆಳಗ್ಗಿನಿಂದ ರಾತ್ರಿಯವರೆಗೆ ಎಡಬಿಡದೆ ನಡೆದ ನಾನಾ ಗೋಷ್ಠಿ, ಚಿಂತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ ಜಾತ್ರೆಗೆ ಹೊಸ ಅರ್ಥ ಬರೆಯಿತು. ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ 30ಕ್ಕೂ ಹೆಚ್ಚು ಸಾಧಕರಿಗೆ ಗೌರವಿಸಲಾಯಿತು.
ಕೋರಮಂಡಲ್ ಕಾರ್ಖಾನೆಯವರ ಭೋಜನ ವ್ಯವಸ್ಥೆ, ಶಿಲ್ಪಿ ಪರಮೇಶ್ ಅವರ ಕಲಾ ಶಿಲ್ಪಗಳು, ಪುಸ್ತಕ ಮಳಿಗೆ ಸಮ್ಮೇಳನದಲ್ಲಿ ವಿಶಿಷ್ಟವಾಗಿತ್ತು. ಸಮ್ಮೇಳನಾಧ್ಯಕ್ಷ ಡಾ.ಕಿಕ್ಕೇರಿ ನಾರಾಯಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್,  ತಾಪಂ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಹಾಸ್ಯ ಸಾಹಿತಿ ಅ.ರಾ.ಮಿತ್ರ, ಐಸಿಎವ್ ಕಾರ್ಖಾನೆ ಬಾಬುರಾಜ್, ಹಿರಿಯ ರಂಗಕರ್ಮಿ ಕೆ.ಜೆ.ನಾರಾಯಣ್, ಕೋಡಿಹಳ್ಳಿ ನಂಜುಂಡೇಗೌಡ, ತಾ.ಕಸಾಪ ಅಧ್ಯಕ್ಷ ಅ.ಮಾ.ಶ್ಯಾಮೇಶ್, ಕರವೇ ಗುರುಮೂರ್ತಿ, ಸಾಸಲು ಶಿವಕುಮಾರ್, ಡಾ.ರಾಮಕೃಷ್ಣೇಗೌಡ, ಕಾಯಿ ಮಂಜೇಗೌಡ, ಮಾರೇನಹಳ್ಳಿ ಲೋಕೇಶ್, ಚೇತನಾ ಮಹೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement