ಕೆರೆಗಳಿಗೆ ಯಗಚಿ ನೀರು ಹರಿಸಲು ಒತ್ತಾಯ
ಜಾವಗಲ್: ಹೋಬಳಿಯ ಗೊಲ್ಲರಹಳ್ಳಿ ಊರಮುಂದಿನ ಕೆರೆ, ಕರಗುಂದ ಉಂಡಿಗನಾಳು ಗ್ರಾಮದ ಕೆರೆಗಳಿಗೆ ಯಗಚಿ ನೀರನ್ನು ತುಂಬಿಸುವಂತೆ ಈ ಭಾಗದ ಗ್ರಾಮಸ್ಥರು ಶಾಸಕ ರುದ್ರೇಶಗೌಡರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಸತತ ಬರಗಾಲದಿಂದ ಜನರು ತತ್ತರಿಸುತ್ತಿದ್ದು, ಮಳೆಯನ್ನು ಆಶ್ರಯಿಸಿ ವ್ಯವಸಾಯ ಮಾಡುತ್ತಿದ್ದ ರೈತರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಗೊಲ್ಲರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಣ್ಣ ಮಾಜಿ ಪ್ರಧಾನ ಮಲ್ಲೇಶಪ್ಪ ಹೇಳಿದರು.
ಸತತ ಬರಗಾಲ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿದು ಜನ ಜಾನುವಾರುಗಳಿಗೆ ಕುಡಿಯುವ ನಿರಿಗೂ ಹಾಹಾಕಾರ ಉಂಟಾಗಿದ್ದು ಯಗಚಿ ನದಿಯನೀರನ್ನು ಈಭಾಗದ ಕೆರೆಗಳಿಗೆ ಹರಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ತಾಪಂ ಸದಸ್ಯರಾರ ಲಕ್ಷ್ಮೀ ರವಿಶಂಕರ್, ರಾಜೇಶ್ವರಿ ಶಿವಾನಂದ್, ಮಾಜಿ ಸದಸ್ಯ ನೇರ್ಲಿಗೆ ಸೋಮಶೇಖರ್, ಎಪಿಎಂಸಿ ಸದಸ್ಯ ಕಲ್ಲಹಳ್ಳಿ ನಾಗರಾಜು, ಗೊಲ್ಲರಹಳ್ಳಿ ವೆಂಕಟೇಶ್, ಪ್ರಸನ್ನ ಕುಮಾರ್ ಕರಗುಂದ ಬಸವರಾಜು ಇದ್ದರು.