ಅಪಘಾತದಲ್ಲಿ ಮಡಿದ ಶಿಕ್ಷಕಿ ದಾಕ್ಷಾಯಣಿಗೆ ಶ್ರದ್ಧಾಂಜಲಿ
ಹಾಸನ: ದಾಕ್ಷಾಯಣಿ ಶಿಕ್ಷಣ ಇಲಾಖೆಯ ನಲಿ- ಕಲಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದರು ಅವರು ಕೇವಲ ಉತ್ತಮ ಶಿಕ್ಷಕಿಯಾಗಿರದೆ ಶಿಕ್ಷಣದಲ್ಲಿ ಕಲೆ, ಪರಿಸರ ಶಿಕ್ಷಣ ಹಾಗೂ ಉತ್ತಮ ನಾಟಕಕಾರ್ತಿಯಾಗಿದ್ದರು ಎಂದು ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಎ. ಅಹಮದ್ ಸ್ಮರಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯು ಇತ್ತೀಚೆಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮಾತ್ರವಲ್ಲ ಶಿಕ್ಷಕ ವೃತ್ತಿಯ ಜೊತೆಗೆ ಸಮಾಜಮುಖಿ ವ್ಯಕ್ತಿತ್ವದ ಮಹಿಳೆಯಾಗಿದ್ದ ಅವರು ಕಟ್ಟಡ ಕಾರ್ಮಿಕರ ವಿಮಾ ಹಕ್ಕುಗಳ ಬಗ್ಗೆ ನೋಂದಣಿ ಮಾಡಿಸಿಕೊಳ್ಳಲು ಶ್ರಮಿಸುತ್ತಿದ್ದ ಅವರು ನಿನ್ನೆ ಶಾಲೆಯಿಂದ ಹಿಂದಿರುಗಿ ಬರುವಾಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಅವರ ಆಕಸ್ಮಿಕ ಸಾವಿನಿಂದ ಬಡ ವಿದ್ಯಾರ್ಥಿಗಳ ಅಕ್ಕರೆಯ ಶಿಕ್ಷಕಿಯನ್ನು ವಿದ್ಯಾ ಇಲಾಖೆ ಹಾಗೂ ಉತ್ತಮ ಸಂಪನ್ಮೂಲ ವ್ಯಕ್ತಿಯನ್ನು ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯು ಕಳೆದುಕೊಂಡಿದೆ ಎಂದು ಹೇಳಿದರು.