ಕಾಲುಬಾಯಿ ಜ್ವರಕ್ಕೆ ಸರ್ಕಾರದಿಂದ ಉಚಿತ ಲಸಿಕೆ
ಬೇಲೂರು: ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರ ಭಯಾನಕವಾಗಿದ್ದು, ರೈತಾಪಿ ವರ್ಗ ಜಾಗೃತಿ ವಹಿಸಬೇಕು, ಸರ್ಕಾರದಿಂದ ಕಾಲುಬಾಯಿ ಜ್ವರಕ್ಕೆ ಉಚಿತ ಲಸಿಕೆ ನೀಡುತ್ತಿದ್ದು, ಇದರ ಉಪಯೋಗವನ್ನು ಬಳಸಿಕೊಳ್ಳಲು ತಾಪಂ ಸದಸ್ಯ ಪರ್ವತಯ್ಯ ಕರೆ ನೀಡಿದರು. ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ತಾಲೂಕು ಪಶು ಚಿಕಿತ್ಸಾಲಯ ಹಾಗೂ ಹೆಬ್ಬಾಳು ಪಶು ಚಿಕಿತ್ಸಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ವಿರೋಧಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲುಬಾಯಿ ಜ್ವರ ಧನ- ಕರುಗಳಿಗೆ ಮೃತ್ಯು ಕೂಪವಾಗಿದ್ದು, ರೈತರು ಅತಿ ಜಾಗೃತಿ ವಹಿಸಬೇಕು, ಕಾರಣ ಇತ್ತೀಚೆಗೆ ರೈತರು ಹೈನುಗಾರಿಕೆಯಲ್ಲಿ ಜೀವನ ನಡೆಸುತ್ತಿದ್ದು, ಹೈನುಗಾರಿಕೆಗೆ ಕಾಲುಬಾಯಿ ಜ್ವರ ಭಾರಿ ಪರಿಣಾಮ ಬೀರುತ್ತದೆ ಎಂದರು.
ಪಶು ಚಿಕಿತ್ಸಾಲಯ ಅಧಿಕಾರಿ ಶಂಕರ್ ಮತ್ತಿತರರು ಮಾತನಾಡಿದರು.