ಜಾನಪದ ಪರಿಷತ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಬಾರಾಸು ಪುನಾರಾಯ್ಕೆ
ಹೊಳೆನರಸೀಪುರ: ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಬಾ.ರಾ.ಸುಬ್ಬರಾಯ ಪುನಾರಾಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿನಾಗರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಕೂಡಿ ಚಂದ್ರಶೇಖರ್, ಖಜಾಂಚಿಯಾಗಿ ಜಿ.ಪಿ. ಮಂಜುನಾಥಗುಪ್ತ ಹಾಗೂ ನಿರ್ದೇಶಕರುಗಳಾಗಿ ಜಿ.ಪಿ.ಅಣ್ಣಾಜಪ್ಪ, ಕುಮಾರ್, ಹೆಚ್.ಎಸ್.ವಿಜಯಕುಮಾರ್, ಹೆಚ್.ಆರ್. ವೀರಬಸಪ್ಪ, ಎಂ.ವಿ.ಸತ್ಯನಾರಾಯಣ ಅವರನ್ನು ಮರುನೇಮಕ ಮಾಡಲಾಗಿದೆ. ಕಾರ್ಯಕ್ರಮ ಆಯೋಜಿಸಲು ಪುಟ್ಟಸೋಮಪ್ಪ,ಆರ್.ಬಿ.ಪುಟ್ಟೇಗೌಡ, ಪ್ರೇಮ ಮಂಜುನಾಥ್, ಎಂ.ಸಿ.ಕುಮಾರಸ್ವಾಮಿ ಇವರನ್ನು ಗೌರವ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ನೂತನ ಅಧ್ಯಕ್ಷ ಬಾ.ರಾ.ಸುಬ್ಬರಾಯ ತಿಳಿಸಿದ್ದಾರೆ.