ಜೆಡಿಎಸ್ನ ನಿರ್ಮಲಾ ಜೆಸಿಪುರ ಗ್ರಾಪಂ ಅಧ್ಯಕ್ಷೆ
ಅರಸೀಕೆರೆ: ತಾಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಿಕ್ಕಹಲ್ಕೂರು ಗ್ರಾಮದ ನಿರ್ಮಲಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಲಿತಮ್ಮ ಕಾಡಪ್ಪ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ನಿರ್ಮಲಾ ರಮೇಶ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಟಿ.ಎನ್. ಮೂರ್ತಿ ಘೋಷಿಸಿದ್ದಾರೆ.
ಗ್ರಾಪಂ ಮಾಜಿ ಅಧ್ಯಕ್ಷ ರಾಯಣ್ಣ, ಸದಸ್ಯರಾದ ನಾಗವೇದಿ ಕರಿಯಪ್ಪ, ಮುಜಾಹಿದ್, ಎಸ್.ಆರ್. ಮಹೇಶ್ವರಪ್ಪ, ಶಂಕರಲಿಂಗಪ್ಪ ಸೇರಿದಮತೆ ಮತ್ತಿತರರು ಇದ್ದರು.