'ನಮ್ಮ ನಡೆ ಮರಗಳೆಡೆಗೆ'ಇಕೋ ಕ್ಲಬ್ ಕಾರ್ಯಕ್ರಮ
ಅರಸೀಕೆರೆ: ಪಟ್ಟಣದ ಸಂತ ಮೇರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಇಕೋ ಕ್ಲಬ್ ವತಿಯಿಂದ ನಮ್ಮ ನಡೆ ಮರಗಳೆಡೆಗೆ ಕಾರ್ಯಕ್ರಮವನ್ನು ಹಿರೇಕಲ್ ಗಡ್ಡ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾಲೇಜು ಪ್ರಾಂಶುಪಾಲ ಸಿಸ್ಟರ್ ಅನ್ತೆರೆಸಾ ಮತ್ತು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಸುಮಾರು ಮೂವತ್ತಕ್ಕೂ ಹೆಚ್ಚು ನಾನಾ ಜಾತಿಯ ಮರಗಳನ್ನು ಗುರುತಿಸಿ ಅವುಗಳ ವೈಜ್ಞಾನಿಕ ನಾಮಧೇಯ, ಜೀವ ವೈವಿಧ್ಯತೆಯಲ್ಲಿ ಅವುಗಳ ಪಾತ್ರ ಮತ್ತು ಔಷಧೀಯ ಗುಣಗಳನ್ನು ದಾಖಲಿಸಿದರು. ಪ್ರಾಂಶುಪಾಲ ಸಿಸ್ಟರ್ ಅನ್ ತೆ ರೆಸಾ ಮಾತನಾಡಿ, ಸಸ್ಯ ಸಂಕುಲಗಳು ದೇಶದ ಸಮೃದ್ಧತೆಯನ್ನು ಪ್ರತಿ ಬಿಂಬಿಸುತ್ತವೆ. ಹಾಗೆಯೇ ಅವು ಆಯಾ ಪ್ರದೇಶದ ಸಂಸ್ಕೃತಿ, ಆಚರಣೆ ಮತ್ತು ಇತಿಹಾಸಗಳನ್ನು ಸಾರಿ ಹೇಳುತ್ತವೆ.