ಬೇಲೂರು: ಶಿವಾಲಯಗಳಲ್ಲಿ ಶಿವರಾತ್ರಿ ವಿಶೇಷ ಪೂಜೆ
ಬೇಲೂರು: ವಿಶ್ವ ಪ್ರಸಿದ್ದಿ ಬೇಲೂರಿನಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಭಿಷೇಕಗಳು ಭಕ್ತಿ ಭಾವದಿಂದ ನಡೆಯಿತು. ಪಟ್ಟಣದ ಶಿವಕುಮಾರ ಸಮುದಾಯ ಭವನದ ಬಳಿಯಲ್ಲಿ ನೆಲೆಸಿರುವ ಶಿವಲಿಂಗೇಶ್ವರಸ್ವಾಮಿಗೆ ಬೆಳಗ್ಗಿನಿಂದಲೇ ವಿವಿಧ ಪೂಜೆಗಳಾದ ರುದ್ರಾಭಿಷೇಕ, ಶತರುದ್ರನಾಮ, ಅಷ್ಟೋತ್ತರ ನಂತರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ದೇವಾಲಯ ಅರ್ಚಕ ಉಮೇಶ್ ಪೂಜೆ ನಡೆಸಿದರು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಎಸ್.ಲಿಂಗೇಶ್, ವಕೀಲರಾದ ಸಿ.ಎಂ.ನಿಂಗರಾಜು, ರಾಜಶೇಖರ್, ಕಾರ್ಯದರ್ಶಿ ಚಂದ್ರಶೇಖರ್, ಪ್ರಶಾಂತ್, ಯೋಗೀಶ್, ಮರುಗೇಶ್ ಇನ್ನು ಮುಂತಾದವರು ಹಾಜರಿದ್ದ ಪೂಜೆಯ ಭಾಗಿಯಾದರು.